ಸುನಿಲ್ ಕುಮಾರ್ ಅಮಾನತು ಕ್ಷೇತ್ರದ ಜನತೆ ತಲೆ ತಗ್ಗಿಸುವಂತಾಗಿದೆ – ಶುಭದ ರಾವ್

ಕಾರ್ಕಳ : ಕರ್ನಾಟಕ ‌ವಿಧಾನಸಭೆಯ ಕಲಾಪದ‌ ಸಂದರ್ಭದಲ್ಲಿ ಸಭಾದ್ಯಕ್ಷರ ಮೇಲೆ ಕಾಗದ ಪತ್ರವನ್ನು ಎಸೆದು ಅಸಭ್ಯ ವರ್ತನೆ ತೋರಿದ ಕಾರಣ ಅಮಾನತುಗೊಂಡ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕ ಸುನಿಲ್ ಕುಮಾರ್‌ ಅವರ ವರ್ತನೆಯಿಂದ ಕ್ಷೇತ್ರದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಕಳದಲ್ಲಿ ಅನೇಕ ಮಹನೀಯರು ಕ್ಷೇತ್ರ ಶಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. ರಾಜ್ಯದ ವಿವಿಧ ಇಲಾಖೆಗಳ ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ಸರಕಾರದ ಸಚಿವರಾಗಿ ಸುದೀರ್ಘವಾಗಿ ಅಧಿಕಾರ ನಡೆಸಿದರೂ ಯಾರು ಕೂಡ ಇಂತಹ‌ ವರ್ತನೆ ತೋರಿ ಅಮಾನತು ಶಿಕ್ಷೆಗೆ ಒಳಗಾಗಲಿಲ್ಲ. ಬದಲಿಗೆ ತಮ್ಮ ಕಾರ್ಯ‌ವೈಖರಿಯಿಂದ ಕ್ಷೇತ್ರದ ಗೌರವವನ್ನು ಎತ್ತಿಹಿಡಿಯುವ ಕೆಲಸವನ್ನು ಮಾಡಿದ್ದಾರೆ. ಆದರೆ, ವಿಧಾನ ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್‌ ಅವರ ವರ್ತನೆ ಕ್ಷೇತ್ರದ ಜನ‌ರಿಗೆ ಮಾಡಿದ ಅವಮಾನವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯದ ಕೋಟ್ಯಾಂತರ ಜನರ ಬದುಕಿಗೆ ಮತ್ತು ರಾಜ್ಯದ ಒಟ್ಟು ಅಭಿವೃದ್ಧಿಗೆ ಪೂರಕವಾದ ಯೋಜನೆಗಳು‌ ಜಾರಿಯಾಗುತ್ತದೆ. ಅದೊಂದು ದೇವಾಲಯ ಇದ್ದಂತೆ ಇಲ್ಲಿ ಯಾವುದೇ ದೊಡ್ಡ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಹಾಗಿರುವಾಗ ಕ್ಷುಲಕ ಕಾರಣಕ್ಕಾಗಿ ಈ ರೀತಿಯ ವರ್ತನೆ ನಿಜಕ್ಕೂ ಬೇಸರದ ಸಂಗತಿ. ಶಾಸಕರು ಈ ರೀತಿಯ ವರ್ತನೆಯನ್ನು ಬಿಟ್ಟರೆ ಅವರಿಗೂ ಒಳಿತು ಮತ್ತು ಕ್ಷೇತ್ರದ ಗೌರವ ಕಾಪಾಡಿದಂತಾಗುತ್ತದೆ ಎಂದು ಶುಭದ ರಾವ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.















































































error: Content is protected !!
Scroll to Top