ಆನೆಕೆರೆ : ವಾಹನ ಡಿಕ್ಕಿಯಾಗಿ ಗಾಯಗೊಂಡ ಗೋವು – ಸ್ಥಳೀಯರಿಂದ ಆರೈಕೆ

ಕಾರ್ಕಳ : ರಸ್ತೆ ಬದಿಯಲ್ಲಿ ಸಾಗುತ್ತಿದ್ದ ದನಕ್ಕೆ ಪಿಕಪ್‌ ವಾಹನವೊಂದು ಡಿಕ್ಕಿಯಾದ ಘಟನೆ ಜು. 20ರಂದು ಕಾರ್ಕಳ ಆನೆಕೆರೆ ಎಸ್‌ಎನ್‌ವಿ ಶಾಲಾ ಬಳಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಹಸುವಿಗೆ ಗಂಭೀರ ಪ್ರಮಾಣದ ಗಾಯವಾಗಿದೆ. ಸ್ಥಳೀಯರು ಗಾಯಗೊಂಡಿರುವ ಹಸುವಿನ ಆರೈಕೆ ಮಾಡಿದ್ದು, ಪಶು ವೈದ್ಯರು ತುರ್ತು ಚಿಕಿತ್ಸೆ ನೀಡಿರುತ್ತಾರೆ. ದನವು 390095 – 626888 ನೋಂದಾಯಿತ ಗುರುತು ಸಂಖ್ಯೆಯನ್ನು ಹೊಂದಿದೆ. ದನದ ವಾರಿಸುದಾರರು‌ 8928968927 (ಸುಮಂತ್) ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ರಸ್ತೆಯಲ್ಲಿ ಸಾಕು ಪ್ರಾಣಿಗಳ ಅಲೆದಾಟ
ಸಾಕು ಪ್ರಾಣಿಗಳನ್ನು ಬೀದಿಗೆ ಬಿಡಬಾರದು ಎಂಬ ಕಾನೂನಿದೆ. ಆದರೆ, ಕಾರ್ಕಳ ನಗರದಲ್ಲಿ ದನ, ನಾಯಿ, ಆಡು ಮೊದಲಾದ ಸಾಕು ಪ್ರಾಣಿಗಳು ರಸ್ತೆಯುದ್ದಕ್ಕೂ ಅಲೆದಾಡುತ್ತ, ಓಡಾಡುತ್ತ ವಾಹನ ಸಂಚಾರಕ್ಕೆ ತೊಡಕಾಗುವುದು ಮಾತ್ರವಲ್ಲದೇ ಅಪಘಾತಕ್ಕೂ ಕಾರಣವಾಗುತ್ತಿದೆ. ಈ ಕುರಿತು ಸಾಕುಪ್ರಾಣಿಗಳ ಮಾಲಕರು ಗಮನ ಹರಿಸಬೇಕಾಗಿದೆ.

ದನದ ಕಿವಿಯಲ್ಲಿರುವ ನೋಂದಾಯಿತ ಗುರುತು ಸಂಖ್ಯೆ














































































error: Content is protected !!
Scroll to Top