ಮುಂಜಾನೆ ನಡೆದ ಕಾರ್ಯಾಚರಣೆ
ಶ್ರೀನಗರ : ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭದ್ರತಾ ಪಡೆ ನಾಲ್ಕು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಮುಗಿಸಿದೆ. ಸೋಮವಾರ ರಾತ್ರಿ 12 ಗಂಟೆ ಸುಮಾರಿಗೆ ಶುರುವಾದ ಕಾರ್ಯಾಚರಣೆ ಇಂದು ನಸುಕಿನ ವರೆಗೆ ಮುಂದುವರಿದು ಅಂತಿಮವಾಗಿ ನಾಲ್ಕು ಉಗ್ರರನ್ನು ಸಾಯಿಸಲಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ.
ಉಗ್ರರು ಇರುವ ಮಾಹಿತಿ ಲಭಿಸಿದ ಬಳಿಕ ಮೊದಲ ಸುತ್ತಿನ ಕಾರ್ಯಾಚರಣೆ ನಡೆಸಿದ ಬಳಿಕ ಪ್ರದೇಶದ ಮೇಲೆ ಡ್ರೋನ್ ಕಣ್ಗಾವಲು ಇರಿಸಲಾಗಿತ್ತು. ಉಗ್ರರ ಓಡಾಟವನ್ನು ಪತ್ತೆಹಚ್ಚಿದ ಬಳಿಕ ಎನ್‌ಕೌಂಟರ್ ಕಾರ್ಯಾಚರಣೆ ನಡೆದಿದೆ. ಸ್ವಾತಂತ್ರ್ಯ ದಿನಕ್ಕಾಗುವಾಗ ವಿಧ್ವಂಸಕ ಕೃತ್ಯ ಎಸಗಲು ಪಾಕ್ ಬೆಂಬಲಿತ ಉಗ್ರ ಸಂಘಟನೆಗಳು ಪ್ರಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಗಡಿಯುದ್ದಕ್ಕೂ ಕಣ್ಗಾವಲು ತೀವ್ರಗೊಳಿಸಿವೆ.






























































