ಹೆಬ್ರಿ : ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟಿ ಪಲ್ಟಿಯಾಗಿ ಸವಾರ ಮತ್ತು ಸಹಸವಾರೆ ಗಾಯಗೊಂಡ ಘಟನೆ ಹೆಬ್ರಿಯಲ್ಲಿ ಜು. 10 ರಂದು ಸಂಭವಿಸಿದೆ. ಗುರುಪ್ರಸಾದ್ ಎಂಬವರ ಸ್ಕೂಟಿಯಲ್ಲಿ ಸುಜಾತ ಹಿಂಬದಿ ಸವಾರೆಯಾಗಿ ಕುಳಿತು ಪ್ರಯಾಣಿಸುತ್ತಿದ್ದ ವೇಳೆ ಹೆಬ್ರಿ ಎಸ್.ಆರ್. ಶಾಲೆ ಸಮೀಪ ಹಠಾತ್ ನಾಯಿ ಅಡ್ಡಬಂದು ಬ್ರೇಕ್ ಹಾಕಿದಾಗ ಇಬ್ಬರೂ ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದಾರೆ. ಸುಜಾತ ಅವರಿಗೆ ತರಚಿದ ಗಾಯ ಮತ್ತು ಗುರುಪ್ರಸಾದ್ ಅವರಿಗೆ ಕಣ್ಣು ಮತ್ತು ತಲೆಗೆ ಗಾಯವಾಗಿದೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























