ಉಡುಪಿ : ಅಪ್ರಾಪ್ತ ವಯಸ್ಸಿನ ಮಲಮಗಳಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಬಂಧಿಸಿ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಬೈಂದೂರಿನಲ್ಲಿ ವಾಸವಾಗಿರುವ ವ್ಯಕ್ತಿ ಸೋಹೆಲ್ ಬಂಧಿತ ಆರೋಪಿ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅನ್ಯ ರಾಜ್ಯದ ಮಹಿಳೆ ಮೊದಲ ಪತಿಯನ್ನು ತೊರೆದು ಸುಹೇಲ್‌ನನ್ನು ಮದುವೆಯಾಗಿದ್ದಳು. ಬೈಂದೂರಿನಲ್ಲಿ ಇಬ್ಬರು ಮಕ್ಕಳೊಂದಿಗೆ ಸೊಹೇಲ್ ಜತೆ ವಾಸಿಸುತ್ತಿದ್ದರು. ಸೊಹೇಲ್ ಹೆಂಡತಿ ಮತ್ತು ಆಕೆಯ ಮತ್ತೊಬ್ಬ ಮಗಳನ್ನು ಕೊಠಡಿಯಲ್ಲಿ ಲಾಕ್ ಮಾಡಿ ನಂತರ ದೊಡ್ಡ ಮಗಳ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಪೊಲೀಸರಿಗೆ ದೂರು ನೀಡಿದ ಮಹಿಳೆ ಮೇಲೂ ಆತ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಲಮಗಳಿಗೆ ಲೈಂಗಿಕ ಕಿರುಕುಳ : ತಂದೆ ಬಂಧನ









































