ಇಡೀ ಜಗತ್ತಿನ ಕುತೂಹಲದ ದೃಷ್ಟಿ ಇಸ್ರೊ ಮೇಲೆ
ಶ್ರೀಹರಿಕೋಟ : ಭಾರತದ ಬಹು ನಿರೀಕ್ಷಿತ ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಆಂಧ್ರ ಪ್ರದೇಶದ ಶ್ರೀಹರಿಕೋಟದ ಬಾಹ್ಯಾಕಾಶ ಕೇಂದ್ರದಲ್ಲಿ ವಿಜ್ಞಾನಿಗಳು ಉಡಾವಣೆಯ ಕೊನೇ ಕ್ಷಣದ ತಯಾರಿಯಲ್ಲಿ ನಿರತರಾಗಿದ್ದು, ಇಂದು ಮಧ್ಯಾಹ್ನ 2.35ಕ್ಕೆ ಉಪಗ್ರಹವನ್ನು ಹೊತ್ತ ಗಗನನೌಕೆ ನಭಕ್ಕೇರಲಿದೆ. 2019ರ ಚಂದ್ರಯಾನ-2 ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಈ ಸಲ ವಜ್ಞಾನಿಗಳು ಬಹಳ ಎಚ್ಚರಿದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಡೀ ಜಗತ್ತು ಭಾರತದ ಈ ಎರಡನೇ ಪ್ರಯತ್ನವನ್ನು ಕುತೂಹಲದಿಂದ ವೀಕ್ಷಿಸುತ್ತಿದೆ. ಭಾರತದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಕಠಿಣ ಗುರಿಯೊಂದಿಗೆ ಚಂದ್ರಯಾನ ನಡೆಸುತ್ತಿದೆ.
ಇಂದು ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನವಾಗಲಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಶನ್ ಮಾಡ್ಯೂಲನ್ನು ಹೊಂದಿದ್ದು, ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ. ಚಂದ್ರಯಾನ-3 ಉಪಗ್ರಹವನ್ನು ಎಲ್ವಿಎಂ3 ರಾಕೆಟ್ ಇಂದು ಮಧ್ಯಾಹ್ನ 2.35ಕ್ಕೆ ಹೊತ್ತೊಯ್ಯಲಿದೆ. ಅದಕ್ಕೆ ಅಂತಿಮ ಕ್ಷಣದ ಪೂರ್ವಸಿದ್ಧತೆಗಳು ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೊ ತಿಳಿಸಿದೆ.
ಉಪಗ್ರಹ ಇಳಿಯಲು ಗೊತ್ತುಪಡಿಸಿದ ಲ್ಯಾಂಡಿಂಗ್ ಕೇಂದ್ರ ಚಂದ್ರನ ದಕ್ಷಿಣ ಧ್ರುವವಾಗಿದೆ, ಚಂದ್ರನ ಮೇಲ್ಮೈ ಮೇಲೆ ಆಗಸ್ಟ್ 23 ಅಥವಾ 24 ರ ಸುಮಾರಿಗೆ ಲ್ಯಾಂಡಿಂಗ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಇದು 14 ಭೂಮಿಯ ದಿನಗಳಿಗೆ ಸಮನಾಗಿರುತ್ತದೆ.









































