ಕಾರ್ಕಳ : ಯುವವಾಹಿನಿ ಕಾರ್ಕಳ ಘಟಕವು ತಾಲೂಕಿನ 15 ಸರಕಾರಿ ಶಾಲಾ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ನಾಟಕ ತರಬೇತಿ ನೀಡಲು ಮುಂದಾಗಿದೆ. ರಂಗ ವಾಹಿನಿ 2023-24 ನಾಟ್ಕಾಭಿಯಾನ ಎಂಬ ಹೆಸರಿನಲ್ಲಿ ತರಬೇತಿ ಕಾರ್ಯಾಗಾರ ನಡೆಯಲಿದ್ದು, ಜು. 13ರಂದು ಪತ್ತೊಂಜಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಇದರ ಅಧ್ಯಕ್ಷ ದಿನೇಶ್ ಕೊರಳ ಕಾರ್ಯಾಗಾರ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷ ಅರುಣ್ ಪೂಜಾರಿ ಮಾಂಜ ವಿದ್ಯಾರ್ಥಿಗಳು ಎಳೆ ವಯಸ್ಸಿನಲ್ಲೇ ರಂಗಭೂಮಿಯ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವುದು ಎಂದರು. ಸಂಪನ್ಮೂಲ ಹಾಗೂ ತರಬೇತಿದಾರರಾಗಿ ಚಂದ್ರನಾಥ್ ಬಜಗೋಳಿ, ಕಾರ್ಕಳ ಯುವವಾಹಿನಿಯ ಸ್ಥಾಪಕ ಅಧ್ಯಕ್ಷ ಸುಧಾಕರ್ ಕಾರ್ಕಳ, ಶಾಲಾ ಮುಖ್ಯ ಶಿಕ್ಷಕಿ ಶಾಂತಿ ಡಿ ಅಲ್ಮೇಡಾ, ಯುವವಾಹಿನಿ ಉಪಾಧ್ಯಕ್ಷರು, ಪುರಸಭೆ ಸದಸ್ಯರಾದ ಮಮತಾ ಅಂಚನ್, ಯುವವಾಹಿನಿ ಸಾಂಸ್ಕೃತಿಕ ನಿರ್ದೇಶಕ ಸಂದೇಶ್ ಕೋಟ್ಯಾನ್, ಮಹಾಲಿಂಗೇಶ್ವರ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಹಾಸಿನಿ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹರ್ಷಿಣಿ, ಯುವವಾಹಿನಿ ಕಾರ್ಯದರ್ಶಿ ಪ್ರಶಾಂತ್ ಬಜಗೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಧಾಕರ್ ಕಾರ್ಕಳ ಕಾರ್ಯಕ್ರಮ ನಿರೂಪಿಸಿ, ಸಂದೇಶ್ ಕೋಟ್ಯಾನ್ ಸ್ವಾಗತಿಸಿ, ಶಿಕ್ಷಕಿ ಗೀತಾ ವಂದಿಸಿದರು.
ಕಾರ್ಕಳ ಯುವವಾಹಿನಿ ವತಿಯಿಂದ ಸರಕಾರಿ ಶಾಲಾ ಮಕ್ಕಳಿಗೆ ನಾಟಕ ತರಬೇತಿ



































