ಕಾರ್ಕಳ ನಗರ ಬಿಜೆಪಿ ಕಾರ್ಯಕರ್ತರಿಂದ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ನೆರವು

ಕಾರ್ಕಳ : ಕಾರ್ಕಳ ನಗರ ಬಿಜೆಪಿ ಜರಿಗುಡ್ಡೆ ವಾರ್ಡಿನ ಕಾರ್ಯಕರ್ತರು ಸೇರಿ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಸಹಾಯಧನವನ್ನು ನೀಡಿದ್ದಾರೆ. ಕಾರ್ಕಳದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ವಿದ್ಯಾರ್ಜನೆಗಾಗಿ ಹಣವನ್ನು ವಿದ್ಯಾರ್ಥಿನಿಗೆ ಹಸ್ತಾಂತರಿಸಿದರು. ಇದೇ ಸಂದರ್ಭ ಅಮ್ಮನ ನೆರವು ಟ್ರಸ್ಟ್‌ ವತಿಯಿಂದ ವಿದ್ಯಾರ್ಥಿನಿಗೆ ಕಲಿಕಾ ಸಾಮಗ್ರಿ ಹಸ್ತಾಂತರಿಸಲಾಯಿತು.
ಪಕ್ಷದ ಹಿರಿಯರಾದ ಟಿ. ರಾಮಚಂದ್ರ ನಾಯಕ್, ವಿಜೇಂದ್ರ ಕಿಣಿ, ದಿನೇಶ್ ಪೈ, ನಗರಾಧ್ಯಕ್ಷ ರವೀಂದ್ರ ಮೊಯ್ಲಿ, ಪ್ರಧಾನ ಕಾರ್ಯದರ್ಶಿ ನಿರಂಜನ್ ಜೈನ್, ಅವಿನಾಶ್‌ ಶೆಟ್ಟಿ, ವಾರ್ಡಿನ ಅಧ್ಯಕ್ಷ ಚಂದ್ರ ಆಚಾರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.







































































error: Content is protected !!
Scroll to Top