ಕಾರ್ಕಳ : ಕಳೆದ ಜೂನ್ ತಿಂಗಳಲ್ಲಿ ತೆಳ್ಳಾರು ದುರ್ಗಾ ಪ್ರೌಢಶಾಲೆಯಲ್ಲಿ ಹಳೆವಿದ್ಯಾರ್ಥಿ ಮತ್ತು ಅಭಿಮಾನಿ ಬಳಗವರಿಂದ ನಡೆದ ನಿವೃತ್ತ ಮುಖ್ಯ ಶಿಕ್ಷಕಿ ಕೆ. ಹರ್ಷಿಣಿಯವರ ಅಭಿನಂದನಾ ಕಾರ್ಯಕ್ರಮದಲ್ಲಿ ಉಳಿದ ಹಣದಲ್ಲಿ ಶಾಲೆಗೆ ಟೀಪಾಯಿ, ಕಾಲು ದೀಪ ನೀಡುವುದರೊಂದಿಗೆ ಕ್ರೀಡಾ ಸಮವಸ್ತ್ರ ಖರೀದಿಗೆ 10 ಸಾವಿರ ರೂ. ಹಣವನ್ನು ಜು. 10 ರಂದು ಹಸ್ತಾಂತರಿಸಲಾಯಿತು. ಈ ಸಂದರ್ಭ ಹಳೆ ವಿದ್ಯಾರ್ಥಿಗಳಾದ ದುರ್ಗಾ ಗ್ರಾ. ಪಂ. ಅಧ್ಯಕ್ಷ ಸತೀಶ್ ನಾಯಕ್, ಮನೋಜ್ ಶೆಟ್ಟಿ, ಸಂತೋಷ್, ರಘುರಾಮ ಪಾಟ್ಕರ್, ಸತೀಶ್ ಕರ್ಕೇರ ಅವರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸ್ಮಿತಾ ಕಾರ್ಯಕ್ರಮ ನಿರ್ವಹಿಸಿದರು.
ತೆಳ್ಳಾರು ಪ್ರೌಢಶಾಲೆಗೆ ಪಿಠೋಪಕರಣಗಳ ಖರೀದಿಗೆ ಧನಸಹಾಯ






























































