ಕಾರ್ಕಳ : ಬಜಗೋಳಿ ಸಮೀಪ ಮುಟ್ರಾಲ್ ದೇವಸ್ಥಾನದ ಬಳಿ ಗೃಹಿಣಿಯೊಬ್ಬರು ಜು. 3 ರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರವೀಣ್ ಭಂಡಾರಿ ಎಂಬವರ ಪತ್ನಿ ಭವ್ಯಾ ಭಂಡಾರಿ (31) ಆತ್ಮಹತ್ಯೆ ಮಾಡಿಕೊಂಡವರು. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ.
ಬಜಗೋಳಿ : ಗೃಹಿಣಿ ಆತ್ಮಹತ್ಯೆ






























































