ಬಿಟ್‌ ಕಾಯಿನ್‌ ಹಗರಣ ಮರು ತನಿಖೆಗೆ ಎಸ್‌ಐಟಿ ರಚನೆ

ವೆಬ್‌ಸೈಟ್‌ ಹ್ಯಾಕ್‌ ಮಾಡಿ ಸರಕಾರದ ಕೋಟಿಗಟ್ಟಲೆ ಹಣ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡಿದ ಪ್ರಕರಣ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಬಿಟ್‌ಕಾಯಿನ್ ಹಗರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.ಸಿಐಡಿ ಅಡಿಯಲ್ಲಿ ಎಸ್‌ಐಟಿಯನ್ನು ರಚನೆ ಮಾಡಿದ್ದೇವೆ. ಈ ತನಿಖೆಯಲ್ಲಿ ಅಂತಾರಾಜ್ಯ, ವಿದೇಶಿಗರು ಬರುವುದರಿಂದ ತನಿಖೆ ಎಷ್ಟು ಸಮಯದಲ್ಲಿ ಮುಗಿಯಲಿದೆ ಎಂಬುದನ್ನು ಈಗಲೇ ಹೇಳಲು ಆಗಲ್ಲ ಎಂದುಹೇಳಿದ್ದಾರೆ.
2021ರಲ್ಲಿ ಹಿಂದಿನ ಬಿಟ್‌ಕಾಯಿನ್ ಹಗರಣ ಬೆಳಕಿಗೆ ಬಂದಿತ್ತು.ಕೆಲವು ಪ್ರಭಾವಿಗಳು ಈ ಹಗರಣದಲ್ಲಿರುವುದರಿಂದ ಹಗರಣವನ್ನು ಮುಚ್ಚಿಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅಂದು ಕಾಂಗ್ರೆಸ್‌ ಆರೋಪಿಸಿತ್ತು. ಶಂಕಿತ ಆರೋಪಿ ಶ್ರೀಕೃಷ್ಣ ರಮೇಶ್ ಅಲಿಯಾಸ್ ಶ್ರೀಕಿ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿ 11.5 ಕೋಟಿ ರೂ. ವರ್ಗಾಯಿಸಿದ್ದ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಕ್ರಿಪ್ಟೋಕರೆನ್ಸಿ ಕಳ್ಳತನ, ಡ್ರಗ್ ಪೆಡ್ಲಿಂಗ್ ಮತ್ತು ಸೈಬರ್ ವಂಚನೆಯ ಆರೋಪಗಳೂ ಕೇಳಿ ಬಂದಿದ್ದವು.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಖಾರ್ಬಿಕರ್ ಅವರ ನೇತೃತ್ವದಲ್ಲಿ ಎಸ್‌ಐಟಿತನಿಖೆ ನಡೆಯಲಿದೆ. ಇದು ಸೈಬರ್ ಅಪರಾಧಕ್ಕೆ ಸಂಬಂಧಿಸಿರುವುದರಿಂದ ತಾಂತ್ರಿಕ ತಜ್ಞರ ಸಹಾಯವನ್ನು ಪಡೆಯಬಹುದು. ಮನೀಷ್ ಕರ್ಬಿಕರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.
ಸಿಐಡಿಯ ಪೊಲೀಸ್ ಮಹಾನಿರ್ದೇಶಕರು ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದಾರೆ. ಸಿಐಡಿ ಡಿಐಜಿ ಡಾ. ಕೆ. ವಂಶಿಕೃಷ್ಣ, ಬೆಂಗಳೂರು ನಗರದ ಡಿಸಿಪಿ (ಆಡಳಿತ) ಅನೂಪ್ ಎ. ಶೆಟ್ಟಿ ಮತ್ತು ಸಿಐಡಿ ಎಸ್ಪಿ ಶರತ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಬೆಂಗಳೂರು ನಗರದ ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ಪ್ರಕರಣದ ಕಡತಗಳನ್ನು ವರ್ಗಾಯಿಸುವಂತೆ ಎಸ್‌ಐಟಿ ಈಗಾಗಲೇ ಕೇಳಿಕೊಂಡಿದೆ.





























































































































error: Content is protected !!
Scroll to Top