ಕಾರ್ಕಳ : ಕೂಲಿ ಕಾರ್ಮಿಕ ಮಹಿಳೆ ದಿಢೀರ್ ಅಸ್ವಸ್ಥರಾಗಿ ಮೃತಪಟ್ಟ ಘಟನೆ ಜೂ. 30 ರಂದು ನಲ್ಲೂರು ಗ್ರಾಮದ ಮುಡೋಡಿ ಎಂಬಲ್ಲಿ ಸಂಭವಿಸಿದೆ.
ಕಮಲಾ (50) ಮೃತ ಮಹಿಳೆ. ಮುಡೋಡಿ ಶೈಲೇಶ್ ವರ್ಮ ಎಂಬವರ ಮನೆಗೆ ಕೆಲಸಕ್ಕೆ ಹೋಗಿದ್ದ ಕಮಲಾ ಅವರಿಗೆ ಸಂಜೆ 5 ಗಂಟೆ ವೇಳೆಗೆ ಡಿಢೀರ್ ಎದೆ ನೋವು ಮತ್ತು ಉರಿ ಕಾಣಿಸಿಕೊಂಡಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಕಮಲಾ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಅಸ್ವಸ್ಥರಾಗಿ ಸಾವು































