ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ : ಸವಾರರಿಗೆ ಗಾಯ

ಹೆಬ್ರಿ : ಅಮೃತ ಭಾರತಿ ಶಾಲೆಯ ಬಸ್ ಸ್ಟಾಪ್ ಬಳಿ ಬೈಕ್‌ಗಳು ಪರಸ್ಪರ ಡಿಕ್ಕಿ ಹೊಡೆದು ಸವಾರರು ಗಾಯಗೊಂಡಿರುವ ಘಟನೆ ಜೂ. 30 ರಂದು ಸಂಭವಿಸಿದೆ. ರಂಜಿತ್‌ ಎಂಬುವವರು ಬೈಕ್‌ನಲ್ಲಿ ಹೆಬ್ರಿ ಕಡೆಗೆ ಸಾಗುತ್ತಿದ್ದಾಗ, ಮುಂಭಾಗದಲ್ಲಿ ಮುದ್ರಾಡಿ ಕಡೆಯಿಂದ ಭರತ್‌ ಎಂಬುವವರು ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎರಡೂ ಬೈಕ್‌ಗಳು ರಸ್ತೆಗೆ ಉರುಳಿದ್ದು, ಸವಾರರಾದ ರಂಜಿತ್‌ಗೆ ತಲೆ, ಎಡಕೈ ಮತ್ತು ಎಡಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಭರತ್‌ಗೆ ಎಡಗಾಲಿಗೆ ಗಾಯವಾಗಿದೆ. ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







































































error: Content is protected !!
Scroll to Top