ಕಾರು ಪಲ್ಟಿ : ಮಣಿಪಾಲದ ಡಾಕ್ಟರ್‌ ಸ್ಥಳದಲ್ಲೇ ಸಾವು

ತಡರಾತ್ರಿ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾದ ಕಾರು

ಉಡುಪಿ : ಕಾರು ಪಲ್ಟಿಯಾಗಿ ವೈದ್ಯರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಮಣಿಪಾಲದಲ್ಲಿ ಸಂಭವಿಸಿದೆ. ಮಣಿಪಾಲದ ಖಾಸಗಿ ಆಸ್ಪತ್ರೆಯ ವೈದ್ಯ ಡಾ. ಸೂರ್ಯನಾರಾಯಣ ಎಂಬವರೇ ಮೃತಪಟ್ಟವರು. ಕಾರಿನಲ್ಲಿದ್ದ ಅವರ ಗೆಳೆಯರಾದ ಸಂಗೀತ್‌ ಮತ್ತು ದಿವಿತ್‌ ಸಿಂಗ್‌ ಎಂಬವರು ಚಿಕ್ಕಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ರಾತ್ರಿ ಮೂವರು ಹೋಟೆಲಿನಲ್ಲಿ ಊಟ ಮಾಡಿಕೊಂಡು ಕಾರಿನಲ್ಲಿ ತಮ್ಮ ಫ್ಲ್ಯಾಟ್‌ಗೆ ಹಿಂದಿರುಗುತ್ತಿರುವಾಗ ರಜತಾದ್ರಿ ರಸ್ತೆಯಲ್ಲಿ ಕಾರು ಪಲ್ಟಿಯಾಗಿದೆ. ವಿಪರೀತ ವೇಗವಾಗಿ ಸಂಚರಿಸುತ್ತಿದ್ದ ಕಾರು ತಿರುವಿನಲ್ಲಿ ಚಾಲಕನ ಹತೋಟಿ ಕಳೆದುಕೊಂಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಬಳಿಕ ಕಾರು ಪಲ್ಟಿಯಾಗಿದ್ದು, ಪರಿಣಾಮವಾಗಿ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದ ಡಾ. ಸೂರ್ಯನಾರಾಯಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.







































































error: Content is protected !!
Scroll to Top