ಯಕ್ಷ ಕಲಾರಂಗದ ಅಧ್ಯಕ್ಷರಾಗಿ ವಿಜಯ ಶೆಟ್ಟಿ ಪುನರಾಯ್ಕೆ

ಡಾ. ಸಿ.ಪಿ.ಅತಿಕಾರಿ ಗೌರವ ಅಧ್ಯಕ್ಷ, ಕಾಂತಾವರ ಮಹಾವೀರ ಪಾಂಡಿ ಪ್ರಧಾನ ಕಾರ್ಯದರ್ಶಿ

ಕಾರ್ಕಳ : ಯಕ್ಷ ಶಿಕ್ಷಣ ಸಂಸ್ಥೆ ಯಕ್ಷ ಕಲಾರಂಗದ 10ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದಿದ್ದು ಅಧ್ಯಕ್ಷರಾಗಿ ಉದ್ಯಮಿ ಕಲಾಪೋಷಕ ವಿಜಯ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ಡಾ. ಸಿ. ಪಿ. ಅತಿಕಾರಿ, ಸಂಚಾಲಕರಾಗಿ ಪ್ರೊ| ಬಿ. ಪದ್ಮನಾಭ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಕಾಂತಾವರ ಮಹಾವೀರ ಪಾಂಡಿ, ಜತೆ ಕಾರ್ಯದರ್ಶಿಯಾಗಿ ಶಿವಸುಬ್ರಹ್ಮಣ್ಯ ಭಟ್, ಕೋಶಾಧಿಕಾರಿಯಾಗಿ ಪ್ರೊ| ಶ್ರೀವರ್ಮ ಅಜ್ರಿ, ಗೌರವ ಸಲಹೆಗಾರರಾಗಿ ಭಾಸ್ಕರ ಕಾರಂತ್, ಡಾ. ಮಂಜುನಾಥ ಕಿಣಿ, ಎ. ವಿ. ಎಂ. ರಮೇಶ್ ಕಾರ್ಣಿಕ್, ಜೀವಂಧರ ಜೈನ್, ರಾಜೇಂದ್ರ ಚೌಟ, ರಾಜೇಶ್ ರೆಂಜಾಳ, ಉಪಾಧ್ಯಕ್ಷರಾಗಿ ಪ್ರೊ| ಕೃಷ್ಣ ಭಟ್, ಕೆ. ಮಾಧವ, ಮಹಾವೀರ ಹೆಗ್ಡೆ ಅಂಡಾರು, ಬೇಬಿ. ಕೆ. ಈಶ್ವರ ಮಂಗಲ, ಡಾ. ಜನಾರ್ದನ್ ನಾಯಕ್, ರವೀಂದ್ರ ಮಡಿವಾಳ, ಮಹಿಳಾ ಸಂಘಟಕರಾಗಿ ಉಷಾ ನಾಯಕ್, ಜ್ಯೋತಿ ಎಸ್. ಶೆಟ್ಟಿ, ಶೋಭಾ ಪ್ರಭು, ವೃಂದಾ ಎಚ್. ಶೆಟ್ಟಿ, ಅನ್ವಿತಾ ಶರ್ಮ, ಕಾರ್ಯಕಾರಿ ಸಮಿತಿಗೆ ವೆಂಕಟೇಶ್ ನಾಯಕ್, ಪ್ರದೀಪ್ ನಾಯಕ್, ಉದಯ ಪಾಟ್ಕರ್, ರಂಜಿತ್ ಪಾಟ್ಕರ್ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಮಹಾವೀರ ಪಾಂಡಿ ಪ್ರಕಟಣೆಯಲ್ಲಿ ತಿಳಿಸಿದರು.

































































error: Content is protected !!
Scroll to Top