ಚತುರ್ಮುಖ ಬಸದಿ ಬಳಿ ಡ್ರಗ್‌ ಮಾರಾಟ : ಇಬ್ಬರು ಆರೋಪಿಗಳ ಸೆರೆ : ಕಾರು ಸಹಿತ 4 ಲ.ರೂ. ಮೌಲ್ಯದ ವಸ್ತು ವಶ

ಕಾರ್ಕಳ : ಕಸಬಾ ಗ್ರಾಮದ ಚತುರ್ಮುಖ ಬಸದಿ ಬಳಿ ನಿಷೇಧಿತ ಡ್ರಗ್‌ ಮಾರಾಟ ಮಾಡುತ್ತಿದ್ದ ಸಾಲ್ಮರ ಜರಿಗುಡ್ಡದ ಮೊಹಮ್ಮದ್ ಅಶ್ಫಾನ್ (20) ಮತ್ತು ಪೇರಲ್ಕೆ ನೆಲ್ಲಿಕಾರು ರಜೀಮ್ (31) ಎಂಬಿಬ್ಬರು ಯುವಕರನ್ನು ಬಂಧಿಸಿ ಅವರಿಂದ ಮಾದಕ ವಸ್ತು, ಕಾರು ಸೇರಿ ಸುಮಾರು 4 ಲ.ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಜೂ.28 ರಂದು ಕಾರ್ಕಳ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್‌ ಠಾಣಾ ನಿರೀಕ್ಷಕ ಮಂಜುನಾಥ್ ಸಿಬ್ಬಂದಿ ಜತೆ ದಾಳಿ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಡ್ರಗ್‌ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮೆಥಾಫಿಟಮೈನ್‌ ಎಂಬ ಮಾದಕ ವಸ್ತು ಪುಡಿಯನ್ನು ಮಾರಾಟ ಮಾಡುತ್ತಿದ್ದರು. ಅವರಿಂದ 13 ಪೊಟ್ಟಣಗಳಲ್ಲಿ ತುಂಬಿಸಿಟ್ಟಿದ್ದ 5.78 ಗ್ರಾಂ ಮಾದಕ ವಸ್ತು, 3 ಮೊಬೈಲ್ ಫೋನ್, ತೂಕ ಮಾಡುವ ಸಾಧನ ಮತ್ತು KA17P2400 ನೋಂದಣಿಯ ರಿಡ್ಜ್‌ ಕಾರು ವಶಪಡಿಸಿಕೊಳ್ಳಲಾಗಿದೆ. 50 ಸಾವಿರ ರೂ. ಮೌಲ್ಯದ ಡ್ರಗ್‌ ಸೇರಿ 3,66,000 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣೆಯ ನಿರೀಕ್ಷಕ ಮಂಜುನಾಥ ಮತ್ತು ಸಿಬ್ಬಂದಿ ರಾಘವೇಂದ್ರ, ಕೃಷ್ಣಪ್ರಸಾದ್, ಪ್ರವೀಣ್, ಸಂಜಯ್‌, ಜೀವನ್, ಪ್ರಶಾಂತ್ ಮತ್ತು ದಿಕ್ಷೀತ್‌ ಪಾಲ್ಗೊಂಡಿದ್ದಾರೆ.





























































































































error: Content is protected !!
Scroll to Top