ಕಾರ್ಕಳ : ತಾಲೂಕಿನ 27 ಗ್ರಾಮ ಪಂಚಾಯತ್‌ಗಳಿಗೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ. ಜೂ. 23 ರಂದು ಬಾಹುಬಲಿ ಪ್ರವಚನ ಮಂದಿರದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ. ಅವರ ಅಧ್ಯಕ್ಷತೆಯಲ್ಲಿ ಮೀಸಲಾತಿ ನಿಗದಿ ಪ್ರಕ್ರಿಯೆ ನಡೆಯಿತು. ಈ ಸಂದರ್ಭ ಅಪರ ಜಿಲ್ಲಾಧಿಕಾರಿ ವೀಣಾ, ಎನ್‌ಐಸಿ ಮಂಜುನಾಥ್, ತಹಶೀಲ್ದಾರ್ ಅನಂತಶಂಕರ್ ಬಿ. ಹಾಗೂ ತಾಲೂಕು ಪಂಚಾಯತ್ ಇಓ ಗುರುದತ್ತ್ ಉಪಸ್ಥಿತರಿದ್ದರು.

ತಾಲೂಕಿನ 27 ಗ್ರಾ. ಪಂ.ಗಳ ಮೀಸಲಾತಿ ನಿಗದಿ
- ಕಡ್ತಲ : ಅಧ್ಯಕ್ಷ – ಹಿಂದುಳಿದ ವರ್ಗ (ಬಿ) , ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ
- ಮರ್ಣೆ : ಅಧ್ಯಕ್ಷ- ಸಾಮಾನ್ಯ ಮಹಿಳೆ , ಉಪಾಧ್ಯಕ್ಷ – ಹಿಂದುಳಿದ ವರ್ಗ (ಬಿ) ಮಹಿಳೆ
- ಹಿರ್ಗಾನ : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ಶಿರ್ಲಾಲು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ
- ಕೆರ್ವಾಶೆ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ಮಾಳ : ಅಧ್ಯಕ್ಷ – ಹಿಂದುಳಿದ ವರ್ಗ (ಎ) , ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಮುಡಾರು : ಅಧ್ಯಕ್ಷ – ಹಿಂದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ದುರ್ಗಾ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ)
- ಕುಕ್ಕುಂದೂರು : ಅಧ್ಯಕ್ಷ – ಅನುಸೂಚಿತ ಜಾತಿ, ಉಪಾಧ್ಯಕ್ಷ – ಹಿಂದುಳಿದ (ಎ) ಮಹಿಳೆ
- ಎರ್ಲಪಾಡಿ : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ
- ಬೈಲೂರು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ , ಉಪಾಧ್ಯಕ್ಷ – ಸಾಮಾನ್ಯ
- ನೀರೆ : ಅಧ್ಯಕ್ಷ – ಸಾಮಾನ್ಯ , ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಪಳ್ಳಿ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ಕಲ್ಯಾ : ಅಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಬಿ)
- ನಿಟ್ಟೆ : ಅಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ)
- ಸಾಣೂರು : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಮಿಯ್ಯಾರು : ಅಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ನಲ್ಲೂರು : ಅಧ್ಯಕ್ಷ – ಸಾಮಾನ್ಯ , ಉಪಾಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ
- ಈದು : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ) ಮಹಿಳೆ
- ರೆಂಜಾಳ : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಇರ್ವತ್ತೂರು : ಅಧ್ಯಕ್ಷ – ಸಾಮಾನ್ಯ, ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಬೋಳ : ಅಧ್ಯಕ್ಷ – ಹಿಂದುಳಿದ ವರ್ಗ (ಎ) , ಉಪಾಧ್ಯಕ್ಷ – ಸಾಮಾನ್ಯ ಮಹಿಳೆ
- ಕಾಂತಾವರ : ಅಧ್ಯಕ್ಷ – ಸಾಮಾನ್ಯ , ಉಪಾಧ್ಯಕ್ಷ – ಹಿಂದುಳಿದ ವರ್ಗ (ಎ)
- ಬೆಳ್ಮಣ್ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ನಂದಳಿಕೆ : ಅಧ್ಯಕ್ಷ – ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ – ಸಾಮಾನ್ಯ
- ಇನ್ನಾ : ಅಧ್ಯಕ್ಷ – ಸಾಮಾನ್ಯ ಮಹಿಳೆ, ಉಪಾಧ್ಯಕ್ಷ – ಅನುಸೂಚಿತ ಜಾತಿ
- ಮುಂಡ್ಕೂರು : ಅಧ್ಯಕ್ಷ – ಹಿಂದುಳಿದ ವರ್ಗ (ಎ) , ಉಪಾಧ್ಯಕ್ಷ – ಅನುಸೂಚಿತ ಜಾತಿ ಮಹಿಳೆ






























































