ಕಾರ್ಕಳ : ಜ್ಙಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗವನ್ನು ಜೀವನದಲ್ಲಿ ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಇದರಿಂದ ಏಕಾಗ್ರತೆಯನ್ನು ಹೆಚ್ಚಿಸಲು ಮತ್ತು ಮಾನಸಿಕ, ದೈಹಿಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಾಧ್ಯ ಎಂದು ಯೋಗ ಶಿಕ್ಷಕ ನರೇಂದ್ರ ಕಾಮತ್ ಅವರು ಹೇಳಿದರು. ಅವರು ಜಿ.ಎಸ್. ಬಿ. ಮಹಿಳಾ ಮಂಡಳಿಯಲ್ಲಿ ಜೂ.21ರಂದು ನಡೆದ ಅಂತರಾಷ್ಟ್ರೀಯ ಯೋಗ ದಿನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಉಸಿರಾಟ ಸಂಬಂಧಿತ ರೋಗಗಳಿಗೆ ಯೋಗದಿಂದ ಯಾವ ರೀತಿ ಪರಿಹಾರ ಕಂಡೊಕೊಳ್ಳಬಹುದೆಂದು ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷೆ ದಿವ್ಯಾ ಡಿ. ಪೈ, ರಾಧಿಕಾ ಶೆಣೈ, ವಂದನಾ ಶೆಣೈ, ವಾರಿಜಾ ವಿ. ಕಾಮತ್, ಶ್ವೇತಾ ಶೆಣೈ, ಲಲಿತಾ ಭಟ್, ರಾಖಿ ಭಟ್, ಸಂಧ್ಯಾ ಕಾಮತ್, ರೇಷ್ಮಾ ಶೆಣೈ ಮೋದಲಾದವರು ಉಪಸ್ಥಿತರಿದ್ದರು.






























































