ಸ್ಕೂಟಿಗೆ ಕಾರು ಡಿಕ್ಕಿ – ಸವಾರನಿಗೆ ಗಾಯ

ಕಾರ್ಕಳ : ಕಾರ್ಕಳ : ಮಿಯ್ಯಾರಿನಲ್ಲಿ ಸ್ಕೂಟಿ ಹಾಗೂ ಕಾರು ಮಧ್ಯೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸವಾರ ಗಾಯಗೊಂಡ ಘಟನೆ ಜೂ. 21ರಂದು ನಡೆದಿದೆ.
ಆಂಟನಿ ಮೋರಸ್ ಎಂಬವರು ಮಿಯ್ಯಾರು ಜೊಡುಕಟ್ಟೆಯಿಂದ ಕಾರ್ಕಳದ ಕಡೆಗೆ ತನ್ನ ಸ್ಕೂಟಿಯಲ್ಲಿ ಬರುತ್ತಿದ್ದಾಗ ಕಾರ್ಕಳದಿಂದ ಬಜಗೋಳಿ ಕಡೆ ಸಾಗುತ್ತಿದ್ದ ಮಾರುತಿ ಸ್ವಿಪ್ಟ್ ಡಿಸೈರ್ ಕಾರು ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ಪಲ್ಟಿಯಾಗಿ ಆಂಟನಿ ಮೋರಸ್ ಅವರಿಗೆ ಗಾಯವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















































































error: Content is protected !!
Scroll to Top