ಏಕಾಗ್ರತೆಗೆ ಯೋಗ ಬಹಳ ಮುಖ್ಯ – ವೃಂದಾ ಶೆಟ್ಟಿ

ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಕಾರ್ಕಳ : ಪ್ರಾಣಾಯಾಮ ಮಾಡುವುದರಿಂದ ಆರೋಗ್ಯವಂತನಾಗಿರಲು ಸಾಧ್ಯ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ವೃಂದಾ ಶೆಟ್ಟಿ ಹೇಳಿದರು. ಅವರು ಜೇಸಿ ಶಾಲೆಯಲ್ಲಿ ಜೂ.21ರಂದು ನಡೆದ ಅಂತರಾಷ್ಟ್ರೀಯ ಯೋಗ ದಿನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಯೋಗಕ್ಕೆ ವಿಶ್ವದ 127 ರಾಷ್ಟ್ರಗಳು ಒಪ್ಪಿಗೆ ನೀಡಿವೆ. ಓಂಕಾರವನ್ನು ಯಾವ ಧರ್ಮದವರು ಕೂಡ ಹೇಳಬಹುದು. ಏಕಾಗ್ರತೆಗೆ ಯೋಗ ಬಹಳ ಮುಖ್ಯವಾದುದು. ಬ್ರಾಹ್ಮರಿ ಆಸನ ಮಾಡಿದರೆ ಚಂಚಲತೆಯಿಂದ ದೂರವಾಗಬಹುದು. ಯೋಗದ ಪ್ರಯೋಜನ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತನ್ನಿ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಜೇಸಿಐ ಕಾರ್ಕಳದ ಅಧ್ಯಕ್ಷ ವಿಘ್ನೇಶ್ ಪ್ರಸಾದ್, ಶಾಲಾ ಮಂಡಳಿಯ ಸದಸ್ಯ ಜಯಾ ಕುಮಾರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸುರೇಖಾ ರಾಜ್ ಸ್ವಾಗತಿಸಿ, ಸಹ ಶಿಕ್ಷಕಿ‌ ರಕ್ಷಾ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಆದ್ಯ ಪಡ್ರೆ ನಿರೂಪಿಸಿ, ಸಹ ಶಿಕ್ಷಕಿ ಮಮತಾ ಗಣೇಶ್ ಮತ್ತು ಶಿಲ್ಪ ಶೆಟ್ಟಿ ಸಂಯೋಜಿಸಿದರು.





























































































































error: Content is protected !!
Scroll to Top