ಬಾಯ್ಸ್ ಸಿಂಗಲ್ಸ್ ಭಾರತ ತಂಡದಲ್ಲಿ ಸಾಣೂರಿನ ಆಯುಷ್ ಶೆಟ್ಟಿ
ಕಾರ್ಕಳ : ಅಂತರಾಷ್ಟ್ರೀಯ ಮಟ್ಟದ ಏಷಿಯಾ ಜೂನಿಯರ್ ಚಾಂಪಿಯನ್ ಶಿಪ್ – 2023 ರ ಪಂದ್ಯಾಟದಲ್ಲಿ ಭಾರತದ ಬಾಯ್ಸ್ ಸಿಂಗಲ್ಸ್ ತಂಡದಲ್ಲಿ ಸಾಣೂರಿನ ಆಯುಷ್ ಶೆಟ್ಟಿ ಆಡಲಿದ್ದಾರೆ. ಇಂಡೋನೇಷಿಯಾದ ಯೋಗ್ಯಕರ್ತರದಲ್ಲಿ ಜು. 7 ರಿಂದ 16 ರವರೆಗೆ ಪಂದ್ಯಾಟ ನಡೆಯಲಿದೆ.
ಆಯುಷ್ ಶೆಟ್ಟಿ ಸಾಣೂರಿನ ರಾಮ್ ಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ದಂಪತಿ ಪುತ್ರ. ಇವರು ಪ್ರಸ್ತುತ ರೇವಾ ಯ್ಯೂನಿವರ್ಸಿಟಿಯಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ.

ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ಕಳೆದ ವಾರ ದೆಹಲಿಯಲ್ಲಿ ತಂಡದ ಹೆಸರು ಪ್ರಕಟಿಸಿದ್ದು, ಆಯುಷ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಆಯುಷ್ ಶೆಟ್ಟಿ ಪ್ರಸ್ತುತ ಪುರಷರ ಸಿಂಗಲ್ಸ್ ನಲ್ಲಿ ಬಿಡಬ್ಲೂಎಫ್ ಶ್ರೇಯಾಂಕದಲ್ಲಿ 20 ನೇ ವಿಶ್ವ ಶ್ರೇಯಾಂಕ ಮತ್ತು ಬಿಎಐ ಚಾರ್ಟ್‌ನಲ್ಲಿ ಎರಡನೇ ಸ್ಥಾನ ಹೊಂದಿದ್ದಾರೆ.









































