ನಿಧಿ ಸಿಕ್ಕಿದೆ ಎಂದು ನಂಬಿಸಿ ಉಡುಪಿ ಮೂಲದ ವ್ಯಕ್ತಿಗೆ 5 ಲ. ರೂ. ಪಂಗನಾಮ

ದಾವಣಗೆರೆ : ನಿಧಿಸಿಕ್ಕಿದೆ ಎಂದು ನಂಬಿಸಿ ವಂಚಿಸುವ ಜಾಲ ಹೆಚ್ಚು ಆಕ್ಟಿವ್ ಆಗುತ್ತಿದ್ದು, ಉಡುಪಿ ಮೂಲದ ವ್ಯಕ್ತಿಯಿಂದ 5 ಲ. ರೂ. ಪಡೆದು 200 ಗ್ರಾಂ ನಕಲಿ ಚಿನ್ನದ ನಾಣ್ಯ ಕೊಟ್ಟು ಕೊಟ್ಟು ವಂಚಿಸಿದ ಕುರಿತು ದಾವಣಗೆರೆಯ ಸಂತೆಬೆನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ವ್ಯಕ್ತಿ ನೋರ್ವ ನಕಲಿ ಚಿನ್ನದ ಜಾಲಕೆ ಬಲಿಯಾಗಿ 5.20ಲಕ್ಷ ರೂಪಾಯಿ ವಂಚನೆಗೊಳಗಾಗಿರುವ ಘಟನೆ ಜೂ.9 ರಂದು ನಡೆದಿದೆ. ಉಡುಪಿ ಜಿಲ್ಲೆಯ ಪೇರ್ಡೂರು ‌ಮೂಲದ ಸಂತೋಷ ಶೆಟ್ಟಿ ಎಂಬ ವ್ಯಕ್ತಿ ವಂಚನೆಗೊಳಗಾಗಿದ್ದು, ಸಂತೋಷ ಎಂದು ಹೆಸರು ಹೇಳಿದ ವ್ಯಕ್ತಿಯಿಂದ ವಂಚನೆಯಾಗಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿದ್ದನಮಠ ಕ್ರಾಸ್ ಬಳಿ ಮಾವಿನ ತೋಟದಲ್ಲಿ ಘಟನೆ ನಡೆದಿದೆ. ನಕಲಿ ಚಿನ್ನದ ನಾಣ್ಯ ನೀಡಿ ಹಣ ಪಡೆದು ವಂಚಿಸಲಾಗಿದೆ. ಮನೆಯ ಪಾಯಾ ತೆಗೆಯುವಾಗ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಕಡಿಮೆ ದರದಲ್ಲಿ ಚಿನ್ನ ಕೊಡುವುದಾಗಿ ಸಂತೋಷ ಶೆಟ್ಟಿಗೆ ಯವರಿಗೆ ಪುಸಲಾಯಿಸಿ 5.20 ಲಕ್ಷ ಹಣ ಪಡೆದು ಖದೀಮರು ವಂಚನೆ ಮಾಡಿದ್ದಾರೆ. 20 ಲಕ್ಷ ಇದ್ರೆ ಹೇಳಿ ಕೆಜಿ ಗಂಟಲೇ ಚಿನ್ನದ ನಾಣ್ಯ ಕೊಡುತ್ತೇವೆ ಎಂದು ಹೇಳಿದ್ದರು ಎಂದು ವರದಿ ತಿಳಿಸಿದೆ.









































































































error: Content is protected !!
Scroll to Top