ಕಾರ್ಕಳ : ಕಾರ್ಕಳದ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿನಿ ಪ್ರಣೀತಾ ಪೂಜಾರಿ ಎನ್‌ಸಿಸಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಬಜಗೋಳಿಯ ಸದಾಶಿವ ಪೂಜಾರಿ-ಅಮಿತಾ ದಂಪತಿಯ ಪುತ್ರಿಯಾಗಿರುವ ಪ್ರಣೀತಾ ಸುರತ್ಕಲ್ ಎನ್‌ಐಟಿಕೆಯಲ್ಲಿ ಏ.19ರಿಂದ 28ರ ತನಕ ನಡೆದ ಐಡಿಎಸ್‌ಎಸ್‌ಸಿ ಫೇಸ್-1 2023 ಕ್ಯಾಂಪ್, ಮುಡಿಪು ಜೆಎನ್‌ವಿ ಕಾಲೇಜಿನಲ್ಲಿ ಮೇ 7ರಿಂದ 16ರ ತನಕ ನಡೆದ ಎರಡನೇ ಕ್ಯಾಂಪ್‌ನಲ್ಲಿ ಮತ್ತು ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ನಲ್ಲಿ ಮೇ 19 ರಿಂದ 28 ತನಕ ನಡೆದ ಕ್ಯಾಂಪ್‌ಗಳಲ್ಲಿ ಇಂಟರ್ ಗ್ರುಪ್ಸ್ ಸ್ಪೋರ್ಟ್ಸ್ ಶೂಟಿಂಗ್ ಚ್ಯಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಭುವನೇಂದ್ರ ಕಾಲೇಜಿನ ದ್ವಿತೀಯ ಬಿಎಸ್ಸಿ ಪದವಿ ತರಗತಿಯಲ್ಲಿ ಪ್ರಣೀತಾ ವಿದ್ಯಾರ್ಜನೆ ಮಾಡುತ್ತಿದ್ದಾರೆ.
ಎನ್‌ಸಿಸಿಯಲ್ಲಿ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿನಿ ಪ್ರಣೀತಾ ಸಾಧನೆ































