ಕಾರ್ಕಳ : ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿಯೊಂದು ನಲ್ಲೂರು ಪರಪ್ಪಾಡಿಯಲ್ಲಿ ಮರಕ್ಕೆ ಡಿಕ್ಕಿಯಾದ ಘಟನೆ ಜೂ. 3 ರಂದು ಸಂಭವಿಸಿದೆ. ಪರಿಣಾಮವಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಲ್ಪೆಯಿಂದ ಬೆಂಗಳೂರಿಗೆ ಮೀನಿನ ಗೊಬ್ಬರ ಸಾಗಿಸುತ್ತಿದ್ದ ಟೆಂಪೋ ಪಾಜೆಗುಡ್ಡೆ ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ವಾಹನದಲ್ಲಿ ಚಾಲಕ ಸೇರಿದಂತೆ ಮೂವರಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ಓರ್ವನನ್ನು ಶೃಂಗೇರಿ ಮೂಲದ ನಯಾಜ಼್ ಅಹಮದ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಗ್ರಾ.ಪಂ. ಸದಸ್ಯ ಸುಮಿತ್ ನಲ್ಲೂರು ಸೇರಿದಂತೆ ಸ್ಥಳೀಯರು ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿದು ಬರಬೇಕಾಗಿದೆ.
ಮೀನಿನ ಗೊಬ್ಬರ ಸಾಗಿಸುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ – ಇಬ್ಬರು ಗಂಭೀರ

































