ಇನ್ನಾ ಗ್ರಾಮದ ಶಾಂಭವಿ ನದಿಯಲ್ಲಿ ಮಾಕ್ ಡ್ರಿಲ್
ಕಾರ್ಕಳ : ಪ್ರಾಕೃತಿಕ ವಿಕೋಪ ಉಂಟಾದಾಗ ಜನರನ್ನು ಪ್ರಾಣಾಪಾಯದಿಂದ ಯಾವ ರೀತಿ ರಕ್ಷಿಸಬಹುದೆಂಬುದರ ಕುರಿತಾಗಿ ಜಿಲ್ಲಾಧಿಕಾರಿಯ ಆದೇಶದ ಮೇರೆಗೆ ಮಾಕ್ ಡ್ರಿಲ್ (ಅಣುಕು ಪ್ರದರ್ಶನ) ಕಾರ್ಯಕ್ರಮ ಇನ್ನಾ ಗ್ರಾಮದ ಬಾಜೆಲ್ತಾರ್‌ನ ಶಾಂಭವಿ ನದಿಯಲ್ಲಿ ಮೇ 30 ರಂದು ನಡೆಯಿತು.
ಪ್ರಾಕೃತಿಕ ವಿಕೋಪದ ಸಂದರ್ಭ ನೀರಿನಲ್ಲಿ ಮುಳುಗಿದಾಗ ಹೇಗೆ ಜನರ ಪ್ರಾಣ ರಕ್ಷಣೆ ಮಾಡಬಹುದು ಎಂಬ ಅಣುಕು ಪ್ರದರ್ಶನ ನಡೆಸಿದ್ದು, ಇನ್ನಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ. ಗುರುದತ್ತ್ ಈ ಸಂದರ್ಭ ಯಾವ ರೀತಿಯಾಗಿ ಪ್ರಾಥಮಿಕ ಚಿಕಿತ್ಸೆ ನೀಡಬಹುದು ಎಂಬುದರ ಕುರಿತು ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್ ಮತ್ತು ತಂಡ ಅಣುಕು ಪ್ರದರ್ಶನದಲ್ಲಿ ಭಾಗಿಯಾಗಿದ್ದು, ತಹಶೀಲ್ದಾರ್ ಬಿ. ಅನಂತಶಂಕರ್, ತಾಲೂಕು ವೈದ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಮತ್ತು ತಂಡ, ಗ್ರಾಮ ಲೆಕ್ಕಾಧಿಕಾರಿ ಹನಮಂತ ಕಟ್ಟಿಮಣಿ, ಇನ್ನಾ ಗ್ರಾ. ಪಂ. ಅಧ್ಯಕ್ಷ ಕುಶ ಮೂಲ್ಯ ಹಾಗೂ ಪಂಚಾಯತ್ ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.

































































