ಕೂಲಿ ಕೆಲಸಕ್ಕಾಗಿ ಬಂದಿದ್ದ ಕುಟುಂಬ
ಮಂಗಳೂರು: ಮಂಗಳೂರಿನಲ್ಲಿ ವಾಸವಾಗಿದ್ದ ತ್ರಿಪುರ ಮೂಲದ ತಾಯಿ ಮತ್ತು ಮಗಳು ನಾಪತ್ತೆಯಾದ ಕುರಿತು ದೂರು ದಾಖಲಿಅಗಿದೆ. ರಿಪನ್ ನಾಮ ಎಂಬವರ ಪತ್ನಿ ಸುಮಿತಾ ರಾಣಿ ಸರ್ಕಾರ್ (23) ಮತ್ತು ಪುತ್ರಿ ರಿಯಾ ನಾಮ (6) ನಾಪತ್ತೆಯಾದವರು.
ರಿಪನ್ ನಾಮ 2 ತಿಂಗಳ ಹಿಂದೆ ತ್ರಿಪುರ ರಾಜ್ಯದಿಂದ ಹೆಂಡತಿ ಮತ್ತು ಮಗಳ ಜತೆ ಮಂಗಳೂರಿಗೆ ಬಂದು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದರು. ಮೇ 23ರಂದು ಸೆಂಟ್ರಿಂಗ್ ಕೆಲಸಕ್ಕೆ ಹೋಗಿ ಮಧ್ಯಾಹ್ನ ಸುಮಾರು 12ಗಂಟೆ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪತ್ನಿ ಮತ್ತು ಮಗಳು ಇರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ಆಫ್ ಬಂದಿದೆ. ಈ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.