ಇನ್ನೊಂದು ಆನ್‌ಲೈನ್‌ ವಂಚನೆ : ಕೆವೈಸಿ ಅಪ್‌ಡೇಟ್‌ ನೆಪದಲ್ಲಿ 3 ಲ.ರೂ. ದೋಖಾ

ಎಷ್ಟೇ ಜಾಗೃತಿ ಮೂಡಿಸಿದರೂ ತಪ್ಪಿಲ್ಲ ವಂಚನೆ

ಮಂಗಳೂರು: ಆನ್‌ಲೈನ್‌ ಮೂಲಕ ಬಂದ ಸಂದೇಶಗಳನ್ನು ನಂಬಿ ಹಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ದಿನ ನಿತ್ಯ ಎಂಬಂತೆ ಸಂಭವಿಸುತ್ತಿವೆ. ಬುದ್ಧಿವಂತರು ಎಂದು ಕರೆಯಲ್ಪಡುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯವರು ಕೂಡು ಇಂಥ ಸಂದೇಶಗಳನ್ನು ನಂಬಿ ಮೋಸ ಹೋಗಿ ಹಣ ಕಳೆದುಕೊಳ್ಳುತ್ತಿದ್ದಾರೆ. ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದೆ ಕೆವೈಸಿ ಅಪ್‌ಡೇಟ್‌ ಮಾಡಬೇಕು ಎಂದು ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು ಬರೋಬ್ಬರಿ 3.10 ಲಕ್ಷ ರೂ. ಕಳೆದುಕೊಂಡಿರುವ ಕುರಿತು ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಬೈಲ್‌ಗೆ ಮೇ 24ರಂದು ಬ್ಯಾಂಕ್‌ ಖಾತೆ ಬ್ಲಾಕ್‌ ಆಗಿದ್ದು, ಕೆವೈಸಿ ಅಪ್‌ ಡೇಟ್‌ ಮಾಡಬೇಕೆಂದು ಎಂದು ಸಂದೇಶ ಬಂದಿತ್ತು. ಬಳಿಕ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಕೆವೈಸಿ ಅಪ್‌ಡೇಟ್‌ ಮಾಡುವ ಅಧಿಕಾರಿ ಎಂದು ಪರಿಚಯ ಮಾಡಿದ ಆತ ಕಸ್ಟಮರ್‌ ಐಡಿ ಕೇಳಿದ್ದಾನೆ.
ಬಳಿಕ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ನಂಬರ್‌ ಕೇಳಿದ್ದು, ಅನಂತರ ಮೊಬೈಲ್‌ಗೆ ಬಂದ ಒಟಿಪಿಯನ್ನು ಪಡೆದುಕೊಂರಿದ್ದಾನೆ. ಒಟಿಪಿ ನೀಡಿದ ಕೂಡಲೇ ಖಾತೆಯಿಂದ ಹಂತ ಹಂತವಾಗಿ ಒಟ್ಟು 3,10,000 ರೂ. ವರ್ಗಾವಣೆಯಾಗಿದೆ. ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ, ಒಟಿಪಿ ಪಡೆದು ಖಾತೆಯಿಂದ ಹಣ ವರ್ಗಾ ಯಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top