ಕಾರ್ಕಳದಲ್ಲಿ 89.2 ಮಿ. ಮೀ. ಮಳೆ ದಾಖಲು

ಕಾರ್ಕಳ : ಕಾರ್ಕಳದಲ್ಲಿ ಮೇ 11 ರಂದು 89. 2 ಮಿ. ಮೀ. ಮಳೆಯಾಗಿದೆ. ಗುರುವಾರ ಸಂಜೆ ಹಾಗೂ ಶುಕ್ರವಾರ ಮುಂಜಾನೆ ಭಾರಿ ಗುಡುಗಿನೊಂದಿಗೆ ಮಳೆ ಸುರಿದಿದ್ದು, ಭೂಮಿ ತಂಪೆರೆದಿದೆ. ಶುಕ್ರವಾರ ನಸುಕಿನ ಜಾವ 3:30ಯಿಂದ 4:30ತನಕ ಸಿಡಿಲಿನ ಅಬ್ಬರದೊಂದಿಗೆ ಉತ್ತಮ ಮಳೆಯಾಗಿದೆ. ಅಜೆಕಾರು, ಹೆಬ್ರಿ, ಮುಂಡ್ಕೂರು, ಬಜಗೊಳಿ, ಮಾಳ ಸೇರಿದಂತೆ ಕಾರ್ಕಳ ಹೆಬ್ರಿ ತಾಲೂಕಿನಾದ್ಯಂತ ಮಳೆಯಾಗಿದೆ. ಕಾರ್ಕಳ ನಗರ ಭಾಗದಲ್ಲಿ 6. 6 ಮಿ. ಮೀ. ಇರ್ವತ್ತೂರಿನಲ್ಲಿ 11. 6 ಮಿ. ಮೀ., ಅಜೆಕಾರು 29.8 ಮಿ. ಮೀ., ಕೆದಿಂಜೆ 4.0 ಮಿ. ಮೀ., ಮುಳಿಕಾರು 12.4 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 24.8 ಮಿ. ಮೀ. ಪ್ರಮಾಣದಲ್ಲಿ ಮಳೆ ದಾಖಲಾಗಿದೆ.

ತಾಲೂಕಿನ ವಿವಿಧೆಡೆ ಭಾರಿ ನಷ್ಟ
ಕೌಡೂರು ಗ್ರಾಮದ ಕೇಶವ ಶೆಟ್ಟಿಯವರ ಮನೆಗೆ ಗುರುವಾರ ರಾತ್ರಿ ಸಂಭವಿಸಿದ ಸಿಡಿಲು ಸಹಿತ ಮಳೆಯಿಂದಾಗಿ ಹಾನಿಯಾಗಿದ್ದು, ಅಂದಾಜು 25000 ರೂ ನಷ್ಟ ಉಂಟಾಗಿದೆ. ಶುಕ್ರವಾರ ಮುಂಜಾನೆ ಮರ್ಣೆ ಗ್ರಾಮದ ಕಿರೆಂಚಿಬೈಲು ಲಕ್ಷ್ಮೀ ರವರ ಮನೆಗೆ ಸಿಡಿಲು ಬಡಿದು ಅಂದಾಜು 50,000 ರೂ. ನಷ್ಟ ಉಂಟಾಗಿದೆ. ಕುಕ್ಕುಂದೂರು ಪರಿಸರದಲ್ಲಿ ಬೀಸಿದ ಗಾಳಿಗೆ ರೇಣುಕಾ ಅವರ ಮನೆಗೆ ತೆಂಗಿನ ಮರ ಬಿದ್ದು ಅಂದಾಜು 25,000 ರೂ. ದಷ್ಟು ನಷ್ಟ ಸಂಭವಿಸಿದೆ.

ಕೌಡೂರು ಗ್ರಾಮದ ಕೇಶವ ಶೆಟ್ಟಿಯವರ ಮನೆಗೆ ಮಳೆಯಿಂದಾ ಹಾನಿ
ಮರ್ಣೆ ಗ್ರಾಮದ ಕಿರೆಂಚಿಬೈಲು ಲಕ್ಷ್ಮೀ ರವರ ಮನೆಗೆ ಸಿಡಿಲು ಬಡಿತ
ಕುಕ್ಕುಂದೂರು ಗ್ರಾಮದ ರೇಣುಕಾ ಅವರ ಮನೆಗೆ ಗಾಳಿಯಿಂದಾಗಿ ತೆಂಗಿನ ಮರ ಬಿದ್ದು ಹಾನಿ
















































error: Content is protected !!
Scroll to Top