ಸತತ 14 ವರ್ಷ ಪೂರ್ಣ ಫಲಿತಾಂಶ
ಹೆಬ್ರಿ : ಸಿಬಿಎಸ್‌ಇ ಫಲಿತಾಂಶ ಮೇ 12 ರಂದು ಪ್ರಕಟಗೊಂಡಿದ್ದು, ಎಸ್‌ಆರ್ ಪಬ್ಲಿಕ್ ಸ್ಕೂಲ್‌ನ ಸಿಬಿಎಸ್‌ಇ ವಿಭಾಗವು ಹತ್ತನೆ ತರಗತಿಯಲ್ಲಿ ಸತತ 14 ನೇ ಬಾರಿಗೆ ಶೇ. 100 ಫಲಿತಾಂಶ ದಾಖಲಿಸಿಕೊಂಡಿದೆ. ವಿದ್ಯಾರ್ಥಿನಿ ಅಭಿಜ್ಞಾ ಎನ್. 468 (93.60%)ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅನನ್ಯ 463 (92.6%) ಮತ್ತು ಇನಾನ್.ಶೆಟ್ಟಿ 463(92.6%) ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಶ್ರದ್ಧಾ ಶೆಟ್ಟಿ 462 (92.4%) ಅಂಕ ಪಡೆದು ತೃತೀಯ ಸ್ಥಾನಿಯಾಗಿದ್ದಾರೆ.
ಪರೀಕ್ಷೆಗೆ ಒಟ್ಟು 89 ವಿದ್ಯಾರ್ಥಿಗಳು ಹಾಜರಾಗಿದ್ದು, 47 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 34 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಎಸ್ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹೆಚ್. ನಾಗರಾಜ ಶೆಟ್ಟಿ ಹಾಗೂ ಕಾರ್ಯದರ್ಶಿ ಸ್ವಪ್ನಾ ಎನ್. ಶೆಟ್ಟಿ ಅಭಿನಂದಿಸಿದ್ದಾರೆ.
























