ಬಾಲಕಿಯರ ಮೇಲ್ಗೈ -ವೆಬ್‌ಸೈಟ್ http://cbse.nic.in ಮತ್ತು http://cbse.gov.in
ಹೊಸದಿಲ್ಲಿ : ವಿದ್ಯಾರ್ಥಿಗಳು ಬಹಳ ಕತರದಿಂದ ಕಾಯುತ್ತಿದ್ದ ಸಿಬಿಎಸ್‌ಇ ಹತ್ತನೇ ತರಗತಿ ಫಲಿತಾಂಶ ಇಂದು ದಿಢೀರ್ ಎಂದು ಪ್ರಕಟವಾಗಿದೆ. 12ನೇ ತರಗತಿಯ ಫಲಿತಾಂಶ ಪ್ರಕಟಿಸಿದ ಬೆನ್ನಿಗೆ ಸಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಶುಕ್ರವಾರ 10ನೇ ತರಗತಿಯ ಫಲಿತಾಂಶ ಪ್ರಕಟಿಸಿದೆ. ಈ ಬಾರಿ ಹತ್ತನೇ ತರಗತಿಯಲ್ಲಿ ಶೇಕಡಾ 93.12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಿಬಿಎಸ್ಇಯ 10 ನೇ ತರಗತಿ ಬೋರ್ಡ್ ಪರೀಕ್ಷೆ ಫೆಬ್ರವರಿ 15ರಿಂದ ಮಾರ್ಚ್ 21ರ ವರೆಗೆ ನಡೆದಿದ್ದರೆ, 12 ನೇ ತರಗತಿ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15 ರಿಂದ ಏಪ್ರಿಲ್ 5ರವರೆಗೆ ನಡೆದಿತ್ತು.
12ನೇ ತರಗತಿಯ ಫಲಿತಾಂಶದಂತೆ 10ನೇ ತರಗತಿಯ ಸಿಬಿಎಸ್‌ಇ ಫಲಿತಾಂಶದಲ್ಲೂ ಬಾಲಕಿಯರು ಮೇಲುಗೈ ಸಂಪಾದಿಸಿದ್ದಾರೆ. ಶೇ. 94.25ರಷ್ಟು ವಿದ್ಯಾರ್ಥಿನಿಯರು ಪಾಸ್ ಆಗಿದ್ದರೆ, ಶೇ.92.27ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ ಗಳಾದ http://cbse.nic.in ಮತ್ತು http://cbse.gov.inನಲ್ಲಿ ಪೋಸ್ಟ್ ಮಾಡಲಾಗಿದೆ. ವಿದ್ಯಾರ್ಥಿಗಳು ಇಲ್ಲಿ ಫಲಿತಾಂಶಗವನ್ನು ನೋಡಬಹುದು.
























