ಇಂದು ರಾಜ್ಯದಲ್ಲಿ ಪ್ರಧಾನಿ ಮೋದಿ ಹವಾ

ಬೆಳಗ್ಗಿನಿಂದ ರಾತ್ರಿ ತನಕ ಸಾರ್ವಜನಿಕ ಸಭೆ, ರೋಡ್‌ ಶೋ

ಬೆಂಗಳೂರು: ಪ್ರಧಾನಿ ನರಂದ್ರ ಮೋದಿ ಇಂದು ಕರ್ನಾಟಕದಲ್ಲಿ ವಿವಿಧ ಪ್ರದೇಶದಲ್ಲಿ ಸಾರ್ವಜನಿಕ ಸಮಾವೇಶಗಳಲ್ಲಿ ಪಾಲ್ಗೊಳ್ಳುವರು. ಬೆಳಗ್ಗೆ 8.20ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಪ್ರಧಾನಿ ಮೋದಿ ಹೊರಡಲಿದ್ದಾರೆ. 10.20ಕ್ಕೆ ಬೀದರ್​​ ಏರ್​ಬೇಸ್​ಗೆ​ ಆಗಮಿಸಿ, 10.25ಕ್ಕೆ ಏರ್​ಬೇಸ್​​ನಿಂದ ಹುಮ್ನಾಬಾದ್​ ಕಡೆಗೆ ಪ್ರಯಾಣ ಬೆಳಸಲಿದ್ದಾರೆ. 10.50ಕ್ಕೆ ಹುಮ್ನಾಬಾದ್​ ಹೆಲಿಪ್ಯಾಡ್​ನಲ್ಲಿ ಲ್ಯಾಂಡ್​ ಆಗಿ, 10.55ಕ್ಕೆ ಹುಮ್ನಾಬಾದ್​ ಹೆಲಿಪ್ಯಾಡ್​ನಿಂದ ಹೊರಡಲಿದ್ದಾರೆ. ನಂತರ 11 ಗಂಟೆಯಿಂದ 11.40ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗುತ್ತಾರೆ.
ಬೆಳಗ್ಗೆ 11.50ಕ್ಕೆವಿಜಯಪುರದತ್ತ ಪ್ರಯಾಣಿಸಲಿದ್ದಾರೆ. 1 ಗಂಟೆಗೆ ವಿಜಯಪುರದಲ್ಲಿ ಸಮಾವೇಶ ಸ್ಥಳವನ್ನು ತಲುಪಲಿದ್ದಾರೆ. 1 ಗಂಟೆಯಿಂದ 1.40ರವರೆಗೂ ಸಮಾವೇಶದಲ್ಲಿ ಪಾಲ್ಗೊಂಡು, 1.45ಕ್ಕೆ ವಿಜಯಪುರ ಸಮಾವೇಶ ಸ್ಥಳದಿಂದ ಹೊರಡುತ್ತಾರೆ.
2.45ಕ್ಕೆ ಕುಡಚಿ ಸಮಾವೇಶದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ. 2.45ರಿಂದ 3.25ರವರೆಗೆ ಸಮಾವೇಶದಲ್ಲಿ ಮತಯಾಚಿಸಲಿದ್ದಾರೆ. 3.30ಕ್ಕೆ ಕುಡಚಿ ಸಮಾವೇಶ ಮುಗಿಸಿ, 4.25ಕ್ಕೆ ವಿಶೇಷ ವಿಮಾನದಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳಸಲಿದ್ದಾರೆ. 5.30ಕ್ಕೆ HAL ಏರ್​ಪೋರ್ಟ್​​ಗೆ​ ಬಂದಿಳಿಯಲಿದ್ದು, 5.35ಕ್ಕೆ ಹೆಚ್​ಎಎಲ್​ನಿಂದ MI-17 ಹೆಲಿಕಾಪ್ಟರ್​​ ಮೂಲಕ 5.55ಕ್ಕೆ ಬಿಐಇಸಿ ಹೆಲಿಪ್ಯಾಡ್​ಗೆ ಆಗಮಿಸುತ್ತಾರೆ. ಸಂಜೆ 6 ಗಂಟೆಗೆ ಹೆಲಿಪ್ಯಾಡ್​ನಿಂದ ಮಾಗಡಿ ರಸ್ತೆಗೆ ಬರುತ್ತಾರೆ. 6.18ರಿಂದ 7 ಗಂಟೆಯವರೆಗೆ ಪ್ರಧಾನಿ ನರೇಂದ್ರ ಮೋದಿಯವರು ರೋಡ್​ ಶೋ ನಡೆಸಲಿದ್ದಾರೆ.
ಸಂಜೆ 7.05ಕ್ಕೆ ಸುಮನಹಳ್ಳಿಯಿಂದ ರಸ್ತೆ ಮೂಲಕ ರಾಜಭವನದತ್ತ ಪ್ರಯಾಣ ಬೆಳಸಲಿದ್ದು, ಸಂಜೆ 7.25ಕ್ಕೆ ರಾಜಭವನ ತಲುಪಲಿದ್ದಾರೆ. ಇಂದು ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.







































































error: Content is protected !!
Scroll to Top