ಬಿಜೆಪಿ ಪರವಾಗಿ ದರ್ಶನ್‌ ಪ್ರಚಾರ

ಇನ್ನೋರ್ವ ಸ್ಟಾರ್‌ ನಟನನ್ನು ಬುಟ್ಟಿಗೆ ಹಾಕಿಕೊಂಡ ಕೇಸರಿ ಪಕ್ಷ

ಬೆಂಗಳೂರು : ಸುದೀಪ್‌ ಬಳಿಕ ಇದೀಗ ಕನ್ನಡದ ಇನ್ನೊಬ್ಬ ಸ್ಟಾರ್‌ ನಟನನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಜನಪ್ರಿಯ ನಟ ದರ್ಶನ್‌ ಇಂದಿನಿಂದ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ. ಕೋಲಾರದಿಂದ ದರ್ಶನ್‌ ಪ್ರಚಾರ ಪ್ರಾರಂಭವಾಗಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದರೊಂದಿಗೆ ಈ ಸಲವೂ ಚುನಾವಣೆಗೆ ತಾರಾ ಮೆರುಗು ಸಿಗಲಿದೆ. ಸುದೀಪ್‌ ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಸುದೀಪ್‌ ಪ್ರಚಾರ ಮಾಡುತ್ತಿದ್ದಾರೆ. ಈಗ ಇನ್ನೋರ್ವ ಜನಪ್ರಿಯ ನಟ ದರ್ಶನ್‌ ಕೂಡ ಬಿಜೆಪಿ ಪರ ಪ್ರಚಾರ ಅಖಾಡಕ್ಕಿಳಿಯಲಿರುವುದು ಬಿಜೆಪಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ನಟಿ ಹಾಗೂ ಸಂಸದೆ ಈಗಾಗಲೇ ಬಿಜೆಪಿ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಈ ನಡುವೆ ಇನ್ನೋರ್ವ ಜನಪ್ರಿಯ ನಟ ಶಿವರಾಜಕುಮಾರ್‌ ಕೂಡ ಚುನಾವಣಾ ಪ್ರಚಾರ ಕಣಕ್ಕಿಳಿಯಲಿದ್ದಾರೆ. ಶಿವರಾಜ್‌ಕುಮಾರ್‌ ಪತ್ನಿ ಗೀತಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು, ಪತ್ನಿಯ ಜತೆ ಶಿವರಾಜ್‌ಕುಮಾರ್‌ ಪ್ರಚಾರ ಮಾಡುತ್ತಾರೆ.







































































error: Content is protected !!
Scroll to Top