ಉಮೇಶ್​ ಪಾಲ್ ಹತ್ಯೆ ಪ್ರಕರಣ : ಆರೋಪಿ ಅತೀಕ್ ಅಹ್ಮದ್​ ಪುತ್ರ ಅಸದ್ ಪೊಲೀಸ್​ ಎನ್​ಕೌಂಟರ್​ನಲ್ಲಿ ಸಾವು

ಉತ್ತರ ಪ್ರದೇಶ : ಉಮೇಶ್​ ಪಾಲ್​ ಹತ್ಯೆ ಪ್ರಕರಣದ ಆರೋಪಿ ಅತೀಕ್ ಅಹ್ಮದ್ ಪುತ್ರ ಅಸದ್ ಪೊಲೀಸ್ ಎನ್​ಕೌಂಟರ್​ನಲ್ಲಿ ಸಾವನ್ನಪ್ಪಿದ್ದಾನೆ. ಉತ್ತರಪ್ರದೇಶದ ಝಾನ್ಸಿಯಲ್ಲಿ ಪೊಲೀಸರಿಂದ ಎನ್​ಕೌಂಟರ್ ನಡೆದಿದ್ದು, ಎನ್​ಕೌಂಟರ್​ನಲ್ಲಿ ಗುಲಾಮ್ ಮೊಹಮ್ಮದ್​ನನ್ನು ಕೂಡ ಹತ್ಯೆಗೈಯಲಾಗಿದೆ. ಅತೀಕ್ ಅಹ್ಮದ್​ ಸೇರಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಪ್ರಯಾಗರಾಜ್​ ವಿಶೇಷ ಕೋರ್ಟ್​ನಿಂದ ಜೀವಾವಧಿ ಶಿಕ್ಷೆ ಇತ್ತೀಚೆಗೆ ಪ್ರಕಟವಾಗಿತ್ತು.

ಅತೀಕ್ ಅಹ್ಮದ್​, ಹನೀಫ್​, ದಿನೇಶ್ ಪಾಸಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಕೋರ್ಟ್​ ಅಪರಾಧಿಗಳಿಗೆ ತಲಾ 1 ಲಕ್ಷ ದಂಡ ವಿಧಿಸಿತ್ತು. ಅತೀಕ್ ಸುಪಾರಿ ನೀಡಿ ಬಿಎಸ್​ಪಿ ಶಾಸಕ ರಾಜು ಪಾಲ್​ರನ್ನು ಹತ್ಯೆ ಮಾಡಿದ್ದರು. ರಾಜು ಪಾಲ್‌ ಹತ್ಯೆ ಪ್ರಕರಣದ ಸಾಕ್ಷಿಯಾಗಿದ್ದ ಉಮೇಶ್​ ಪಾಲ್​ರನ್ನು ಹಾಡಹಗಲೇ ಪೊಲೀಸರ ಎದುರೇ ಹತ್ಯೆ ಮಾಡಲಾಗಿತ್ತು. ಅಸದ್​ನ ಸುಳಿವು ಕೊಟ್ಟವರಿಗೆ 5 ಲಕ್ಷ ರೂ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

















































error: Content is protected !!
Scroll to Top