ಹೂವಿನ ಬೆಳೆಗಾರರ ಸಂಘದ ಹೆಬ್ರಿ ಶಾಖೆಯ ಉದ್ಘಾಟನಾ ಸಮಾರಂಭ

ಕಾರ್ಕಳ : ಕಾರ್ಕಳ ಅನಂತಶಯನ ಎ.ಪಿ.ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಹೂವಿನ ಬೆಳೆಗಾರರ ಸಂಘದ ಹೆಬ್ರಿ ಶಾಖೆಯ ಉದ್ಘಾಟನಾ ಸಮಾರಂಭವು ಎ. 10 ರಂದು ಮಧ್ಯಾಹ್ನ 3-10ಕ್ಕೆ ಹೆಬ್ರಿ ವಿನೂ ನಗರ ಪುಷ್ಪಾ ಕಾಂಪ್ಲೆಕ್ಸ್‌ನಲ್ಲಿ ಜರುಗಲಿದೆ. ಕುಂದಾಪುರ ಉಪವಿಭಾಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್‌ ಕುಮಾರ್‌ ಉದ್ಘಾಟನೆಯನ್ನು ನೆರವೇರಿಸಲಿದ್ದು, ಕಾರ್ಕಳ ಹೂವಿನ ಬೆಳೆಗಾರರ ಸಂಘದ ಅಧ್ಯಕ್ಷ ಫ್ರಾನ್ಸಿಸ್‌ ಡಿಸೋಜ ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ.
ಹೆಬ್ರಿ ಅನಂತಪದ್ಮನಾಭ ಸನ್ನಿಧಿಯ ಎಚ್‌. ಭಾಸ್ಕರ್‌ ಜೋಯಿಸ್‌ ಮತ್ತು ಅಜೆಕಾರು ಸೆಕ್ರೆಡ್‌ ಹಾರ್ಟ್‌ ಚರ್ಚ್‌ನ ಪ್ರವೀಣ್‌ ಅಮೃತ್‌ ಮಾರ್ಟಿಸ್‌ ಆಶೀರ್ವಚನ ನೀಡಲಿರುವರು. ಭದ್ರತಾ ಕೊಠಡಿ ಉದ್ಘಾಟನೆಯನ್ನು ಉಡುಪಿ ತೋಟಗಾರಿಕೆ ಇಲಾಖೆ ಉಪನಿರ್ದೆಶಕಿ ಭವನೇಶ್ವರಿ, ಗಣಕಯಂತ್ರದ ಉದ್ಘಾಟನೆಯನ್ನು ಹೆಬ್ರಿ ಎಸ್.‌ ಆರ್.‌ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.‌ ನಾಗರಾಜ ಶೆಟ್ಟಿ ಹಾಗೂ ಇ-ಸ್ಟಾಂಪಿಂಗ್‌ ಉದ್ಘಾಟನೆಯನ್ನು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ, ಕರುಣಾಕರ ಶೆಟ್ಟಿ ಮಾಡಲಿರುವರು.
ಕಾರ್ಯಕ್ರಮದಲ್ಲಿ ಹೆಬ್ರಿ ಗ್ರಾ. ಪಂ. ಅಧ್ಯಕ್ಷ ಮಾಲತಿ, ಎಪಿಎಂ ಸಮೂಹ ಸಂಸ್ಥೆಯ ಹೆಚ್.‌ ಪ್ರವೀಣ್‌ ಬಳ್ಳಾಲ್‌, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಚಂದ್ರಶೇಖರ ಬಾಯಾರಿ, ಉದ್ಯಮಿ ಎಚ್.‌ ಸತೀಶ್‌ ಪೈ, ಪುಷ್ಪಾ ಕಾಂಪ್ಲೆಕ್ಸ್‌ ಕಟ್ಟಡ ಮಾಲಕ ಚಂದ್ರ ನಾಯ್ಕ್‌ ಹಾಗೂ ಸಮಾಜ ಸೇವಕಿ ಅನಿತಾ ಡಿಸೋಜ ಬೆಳ್ಮಣ್‌ ಉಪಸ್ಥಿತರಿರುವವರು ಎಂದು ಸಂಘದ ಅಧ್ಯಕ್ಷ ಫ್ರಾನ್ಸಿಸ್‌ ಡಿಸೋಜ, ಉಪಾಧ್ಯಕ್ಷ ನವೀನ್‌ ಶೆಣೈ ಹಾಗೂ ನಿರ್ದೆಶಕ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top