ಎ. 22- 30 : ಚಿಣ್ಣರ ಮೇಳ – ಮಕ್ಕಳ ಬೇಸಿಗೆ ಶಿಬಿರ

ಕಾರ್ಕಳ : ಯಕ್ಷ ರಂಗಾಯಣದ ಆಶ್ರಯದೊಂದಿಗೆ ರಂಗಮಾತ್ರಿಕ ಜೀವನ್‌ ರಾಂ ಸುಳ್ಯ ನಿರ್ದೇಶನದಲ್ಲಿ ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನ ಯಕ್ಷ ರಂಗಾಯಣ ಆವರಣದಲ್ಲಿ ಎ. 22 ರಿಂದ 30 ರವರೆಗೆ ಚಿಣ್ಣರ ಮೇಳ ಮಕ್ಕಳ ಬೇಸಿಗೆ ಶಿಬಿರ ನಡೆಯಲಿದೆ. ಪ್ರತಿದಿನ ಬೆಳಗ್ಗೆ 9:30 ರಿಂದ ಸಂಜೆ 4: 30 ರವರೆಗೆ ಶಿಬಿರ ನಡೆಯಲಿದ್ದು, ನಾಡಿನ ಪ್ರಸಿದ್ಧ ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ವೈವಿಧ್ಯಮಯ ವಿಷಯಗಳ ಗುಣಮಟ್ಟದ ತರಬೇತಿ ನೀಡಲಾಗುತ್ತದೆ. 7 ರಿಂದ 15 ವರ್ಷದ ಸೀಮಿತ ಮಕ್ಕಳಿಗೆ ಅವಕಾಶವಿದ್ದು, 250 ರೂ. ಪ್ರವೇಶಾತಿ ಶುಲ್ಕ ಇರಲಿದೆ. ಆಸಕ್ತ ವಿದ್ಯಾರ್ಥಿಗಳು ಕೂಡಲೇ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9449166492, 8105985956, 9480010096 ನಂಬರಿಗೆ ಸಂಪರ್ಕಿಸಿಬಹುದು ಎಂದು ಯಕ್ಷರಂಗಾಯಣದ ನಿರ್ದೇಶಕ ಜೀವನ್‌ ರಾಂ ಸುಳ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.































































































error: Content is protected !!
Scroll to Top