ಕಾರ್ಕಳ : ಕ್ವಾರಿ ಆ್ಯಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಅವರ ಕಾನೂನು ಬದ್ಧ ಗಣಿಗಾರಿಕೆ ಎಂಬ ವಿಶೇಷ ಸಂಚಿಕೆಯು ಮಾ. 27ರಂದು ಪರ್ಪಲೆ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ರವೀಂದ್ರ ಶೆಟ್ಟಿ ಬಜಗೋಳಿ ಅವರ ನೇತೃತ್ವದಲ್ಲಿ ಕಾನೂನು ಬದ್ಧ ಗಣಿಗಾರಿಕೆಗಾಗಿ ರಾಜ್ಯಾದ್ಯಂತ ಹೋರಾಟ ನಡೆದಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಡಿ ಸರಕಾರದಿಂದ ಅಂಗೀಕರಿಸುವಲ್ಲಿ ಯಶಸ್ವಿಯಾದ ಸಾಹಸ ಗಾಥೆಯನ್ನು ವಿವರಿಸುವ ಕುರಿತು ಮಾಧ್ಯಮ ಬಿಂಬ ಪತ್ರಿಕೆಯು ವಿಶೇಷ ಸಂಚಿಕೆಯನ್ನು ಹೊರತಂದಿದೆ.
ಹಿರಿಯರಾದ ಬೋಳ ಪ್ರಭಾಕರ ಕಾಮತ್ ಸಂಚಿಕೆ ಬಿಡುಗಡೆಗೊಳಿಸಿ, ಶುಭಹಾರೈಸಿದರು. ರವೀಂದ್ರ ಶೆಟ್ಟಿ ಅವರು ಮಾತನಾಡಿ, ಸಮಾಜದ ಬೆಳವಣಿಗೆಗೆ ಹಾಗೂ ಸರಕಾರದ ಆರ್ಥಿಕ ಸಬಲೀಕರಣಕ್ಕೂ ಪೂರಕವಾಗಿ ನಡೆಸಿದ ಹೋರಾಟ ಯಶಸ್ಸನ್ನು ಕಂಡಿರುವುದು ಸಂತಸ ತಂದಿದೆ ಎಂದರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಉದ್ಯಮಿ ರವೀಂದ್ರ ಶೆಟ್ಟಿ ಅವರು ತನ್ನ ಜೀವನದ ಏಳು-ಬೀಳುಗಳ ನಡುವೆಯೂ ಸಮಾಜದ ಅಭಿವೃದ್ಧಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಉದ್ಯಮಿ ಬೋಳ ಪ್ರಶಾಂತ್ ಕಾಮತ್, ರೂಪ ರವೀಂದ್ರ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್, ಕಲ್ಕುಡ, ಕಲ್ಲುರ್ಟಿ ಹಾಗೂ ಪರಿವಾರ ದೈವಗಳ ಟ್ರಸ್ಟಿ ಸುಭಾಶ್ ಹೆಗ್ಡೆ ನಿಟ್ಟೆ, ದಾಮೋದರ ಶೆಟ್ಟಿ, ಸತ್ಯೇಂದ್ರ ಭಟ್, ಹಿಂದು ಜಾಗರಣ ವೇದಿಕೆ ದ.ಕ. ಜಿಲ್ಲಾ ಸಹಸಂಚಾಲಕ ಸಮಿತ್‌ರಾಜ್ ದರೆಗುಡ್ಡೆ, ಮಿಯ್ಯಾರು ಪಂಚಾಯತ್ ಅಧ್ಯಕ್ಷ ಗಿರೀಶ್ ಅಮೀನ್, ಉದ್ಯಮಿ ಗುರುಪ್ರಸಾದ್ ನಾರಾವಿ, ಆನಂದ ನಾಯಕ್ ಪದವು, ತಾ. ಪಂ. ಮಾಜಿ ಅಧ್ಯಕ್ಷ ಸುಂದರ ಬಿ., ಬಜರಂಗದಳ ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕೆ, ಬಜಗೋಳಿ ಶಾಲಾ ನಿವೃತ್ತ ಶಿಕ್ಷಕ ಕೃಷ್ಣ ಮೊಯ್ಲಿ, ಪ್ರವೀಣ್ ಶೆಟ್ಟಿ ಈದು, ಪ್ರಶಾಂತ್ ಶೆಟ್ಟಿ ಕರಾವಳಿ, ಶರತ್ ಭಟ್ ಕಾನಂಗಿ, ಹಿಂದು ಜಾಗರಣ ವೇದಿಕೆಯ ರಘು ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಮಾಧ್ಯಮ ಬಿಂಬದ ವ್ಯವಸ್ಥಾಪಕ ಸಂಪಾದಕ ವಸಂತ್ ಕುಮಾರ್ ಬೆಳ್ತಂಗಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಪಾದಕ ನವೀನ್ ಸಾಲ್ಯಾನ್, ಸಿಬ್ಬಂದಿಗಳಾದ ಹರೀಶ್ ಆಚಾರ್ಯ, ರಂಜಿತ್ ಗೌಡ, ಇಮ್ಮಿ ಕಾರ್ಕಳ, ಮಣಿರಾಜ್ ನಿಟ್ಟೆ ಭಾಗವಹಿಸಿದ್ದರು.




















