ಆರೋಪಿ ಸಹಿತ ಕಳವು ಗೈದ ಚಿನ್ನಾಭರಣಗಳ ಪತ್ತೆ

ಕಾರ್ಕಳ : ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೈಲಾಜೆ ಪಾದೆಮನೆ ರಾಘವೇಂದ್ರ ಭಟ್ ರವರ ಮನೆಯ ಕಪಾಟಿನ ಬಾಗಿಲನ್ನು ಯಾರೋ ಕಳ್ಳರು ತೆರೆದು ಸುಮಾರು ಐದೂವರೆ ಲಕ್ಷ ಬೆಲೆಬಾಳುವ ಚಿನ್ನದ ಆಭರಣಗಳು ಮತ್ತು ನಗದು ರೂ. 5500/- ನ್ನು ಕಳ್ಳತನ ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿಗಳ ತಂಡವು ಆರೋಪಿಯಾದ ಹುಬ್ಬಳ್ಳಿಯ ಮಾರುತಿ ನಗರದ ಚಂದ್ರಗೌಡ ಪಾಟೀಲ್ ಎಂಬಾತನನ್ನು ಬಂಧಿಸಿ, ಕಳ್ಳತನ ಮಾಡಿದ್ದ 5.50 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಪತ್ತೆ ಮಾಡಿರುತ್ತಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಹಾಕೆಯವರ ಸೂಚನೆಯಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ದಲಿಂಗಪ್ಪ KSPS, ಕಾರ್ಕಳ ಪೊಲೀಸ್ ಉಪಧೀಕ್ಷಕ ಅರವಿಂದ ಕಲಗಜ್ಜಿ ರವರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ವೃತ್ತ ಕಚೇರಿ ಸಿಬ್ಬಂದಿ ಗಿರೀಶ್, ಪ್ರಶಾಂತ್, ಅಶೋಕ್, ವಿಶ್ವನಾಥ್, ಗಣೇಶ್ ಮತ್ತು ರುಕ್ಮಿಣಿಯರೊಂದಿಗೆ ಎಸ್.ಪಿ ಕಚೇರಿಯ ದಿನೇಶ್ ಮತ್ತು ಶಿವಾನಂದ್ ರವರು ಪತ್ತೆ ಕಾರ್ಯಕ್ಕೆ ಸಹಕಾರ ನೀಡಿರುತ್ತಾರೆ.





























































































































error: Content is protected !!
Scroll to Top