ಸಾಧಕ ರಾಮಕೃಷ್ಣ ಆಚಾರ್‌ ಅವರಿಗೆ ಗೌರವ ಡಾಕ್ಟರೇಟ್‌

ಹೆಬ್ರಿ : ಸಾಧಕ, ಕೃಷಿಕ, ಅಂತರಾಷ್ಟ್ರೀಯ ಮಟ್ಟದ ಕೈಗಾರಿಕೋದ್ಯಮಿ ಮೂಡಬಿದಿರೆ ಎಸ್‌ಕೆಎಫ್ ಸಮೂಹ ಸಂಸ್ಥೆ ಮತ್ತು ಮುನಿಯಾಲಿನ ಸಂಜೀವಿನಿ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರದ ಸಂಸ್ಥಾಪಕರಾಗಿರುವ ಜಿ. ರಾಮಕೃಷ್ಣ ಆಚಾರ್‌ ಅವರ ಕೃಷಿ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾಲಯ ಪ್ರತಿಷ್ಠಿತ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ. ಮಂಗಳೂರು ವಿಶ್ವ ವಿದ್ಯಾನಿಲಯದ 41ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಪ್ರಶಸ್ತಿ ಪ್ರದಾನ ಮಾಡಿದರು.
ಜಿ.ರಾಮಕೃಷ್ಣ ಆಚಾರ್ ಸ್ಥಾಪಿಸಿದ ಎಸ್‌ಕೆಎಫ್ ಉದ್ಯಮ ಸಮೂಹ ಸಂಸ್ಥೆಯು ಸಿರಿಧಾನ್ಯಗಳ ಸಂಸ್ಕರಣೆ, ಕುಡಿಯುವ ಸ್ವಚ್ಛ ನೀರಿನ ಪೂರೈಕೆ, ತ್ಯಾಜ್ಯ ನೀರಿನ ಸಂಸ್ಕರಣೆಯಂತಹ ಆವಿಷ್ಕಾರಗಳ ಮೂಲಕ ಎಸ್‌ಕೆಎಫ್‌ ಸಂಸ್ಥೆ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ 40 ವರ್ಷಗಳಿಂದ ಮುಂಚೂಣಿಯಲ್ಲಿದೆ. ವಲ್ಕನ್ ವೇಸ್ಟ್ ವಾಟರ್ ಮ್ಯಾನೇಜ್‌ಮೆಂಟ್ ಎನ್ನುವುದು ಇನ್ನೊಂದು ಕೊಡುಗೆ, ಭಾರತದಲ್ಲಿ ಶಾಲಾ ಕಾಲೇಜು ಆಸ್ಪತ್ರೆ, ವಾಣಿಜ್ಯ ಸಂಕೀರ್ಣ, ವಸತಿ ಸಮುಚ್ಚಯಗಳು ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿವೆ. ಅದಕ್ಕಾಗಿ ಚರಂಡಿ ನೀರು ಸಂಸ್ಕರಣೆಯ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸಂಸ್ಕರಿತ ನೀರನ್ನು ತೋಟ, ಮರುಬಳಕೆಗೆ ಯೋಗ್ಯವಾಗಿಸುವ ವಿಧಾನ ವಿಶ್ವಮಾನ್ಯತೆ ಪಡೆದಿದೆ.
ಸಂಜೀವಿನಿ ಗೋಧಾಮ ನಿರ್ಮಾತೃ
ಕೃಷಿಯತ್ತ ಆಸಕ್ತಿ ಬೆಳೆಸಿಕೊಂಡು ಅವರು ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ 35ಎಕರೆ ಪ್ರದೇಶದಲ್ಲಿ ಸಂಜೀವಿನಿ ಗೋಧಾಮವನ್ನ ನಿರ್ಮಿಸಿದ್ದು, ಅದರಲ್ಲಿ ದೇಶೀಯ ತಳಿಯ ಹಸುಗಳನ್ನು ಸಾಕುತ್ತಿದ್ದು, ಮಾದರಿ ಗೋಧಾಮವನ್ನಾಗಿ ಮಾಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.































































































































error: Content is protected !!
Scroll to Top