ಕಾರ್ಕಳ : ಮಂಗಳೂರು ವೃತ್ತ, ಕುಂದಾಪುರ ವಿಭಾಗ ಮೂಡುಬಿದಿರೆ ವಲಯದ ನಲ್ಲೂರು ಹರಿಯಪ್ಪನ ಕೆರೆಯ ಪಾಜೆಗುಡ್ಡೆ ಅರಣ್ಯದ ನಾಲ್ಕು ಎಕರೆ ಪ್ರದೇಶದಲ್ಲಿನ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದ ಉದ್ಘಾಟನಾ ಸಮಾರಂಭವು ಮಾ. 8 ರಂದು ಜರುಗಲಿದೆ.
ಸಚಿವ ವಿ. ಸುನೀಲ್ ಕುಮಾರ್ ಉದ್ಘಾಟನೆಯನ್ನು ನೆರವೇರಿಸಲಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲೆಯ ಶಾಸಕರು, ಇಲಾಖಾ ಅಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು.
ಈ ಉದ್ಯಾನವನದಲ್ಲಿ ಬೋಟಿಂಗ್, ಮಕ್ಕಳ ಆಟಿಕಗಳು, ವಾಕಿಂಗ್ ಟ್ರ್ಯಾಕ್, ಅರಣ್ಯ ಚಾರಣಪಥ, ರಾಶಿವನ, ನಕ್ಷತ್ರವನ, ಔಷಧೀಯ ವನ, ಜಲಪಾತ, ರಾಕ್ ಗಾರ್ಡನ್, ಮುಖ್ಯವಾಗಿ ಪಿಶ್ ಪೆಡಿಕ್ಯೂರ್, ಬಟರ್ ಫ್ಲೈ ಪಾರ್ಕ್, ಆಕರ್ಷಕ ಸೆಲ್ಫಿ ಪಾಯಿಂಟ್, ಶೂಟಿಂಗ್ ಸ್ಪಾಟ್‌ನ್ನು ಸಚಿವ ವಿ. ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಮೂಡಬಿದಿರೆ ವಲಯ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಸಹಾಯಕ ಅರಣ್ಯಾ ಸಂರಕ್ಷಣಾಧಿಕಾರಿ ಸತೀಶ್ ಎನ್. ಮತ್ತು ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ ತಿಳಿಸಿದ್ದಾರೆ.
















































































