ಫೆ. 18 : ಶ್ರೀ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ ಅಖಂಡ ಭಜನಾ ಮಹೋತ್ಸವ

ಕಾರ್ಕಳ : ಕಾಂತಾವರದ ಶ್ರೀ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ. 18 ರಂದು ಸೂರ್ಯೋದಯದಿಂದ ಫೆ. 19 ರ ಸೂರ್ಯೋದಯದರವರೆಗೆ ಅಖಂಡ ಭಜನಾ ಮಹೋತ್ಸವ ಜರುಗಲಿದೆ. ಫೆ. 18 ರ ಬೆಳಿಗ್ಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ. 19 ರ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಅನಂದಭಜನೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿಯಾಗಬೇಕೆಂದು ಕ್ಷೇತ್ರದ ಧರ್ಮದರ್ಶಿ ಜೀವಂಧರ ಬಲ್ಲಾಳ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.









































































































error: Content is protected !!
Scroll to Top