ಕಾರ್ಕಳ : ಸ್ಕೂಟರ್ಗೆ ಟಿಪ್ಪರ್ ಢಿಕ್ಕಿಯಾದ ಪರಿಣಾಮ ಸವಾರೆ ಸ್ಥಳದಲ್ಲೇ ಮೃತಪಟ್ಟ ಘಟನೆ ಜ. 26 ರ ಮಧ್ಯಾಹ್ನ ಅತ್ತೂರಿನಲ್ಲಿ ಸಂಭವಿಸಿದೆ. ಮೃತಪಟ್ಟ ಮಹಿಳೆ ಮೂಡಬಿದ್ರೆ ಮೂಲದ ಜಾಹಿರ ಬಾನು (44) ಎಂದು ಗುರುತಿಸಲಾಗಿದೆ. ಟಿಪ್ಪರ್ ಹಾಗೂ ಸ್ಕೂಟರ್ ಎರಡೂ ವಾಹನಗಳು ಅತ್ತೂರಿನ ಕಡೆಗೆ ಸಾಗುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಕಾರ್ಕಳ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಅತ್ತೂರು : ಸ್ಕೂಟರ್ಗೆ ಟಿಪ್ಪರ್ ಢಿಕ್ಕಿ – ಸವಾರೆ ಸ್ಥಳದಲ್ಲೇ ಸಾವು






























































