ಜ. 22 – 26 : ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವ

ಕಾರ್ಕಳ : ಸುಪ್ರಸಿದ್ಧ ಕ್ರೈಸ್ತ ಶ್ರದ್ಧಾ ಕೇಂದ್ರ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವ ಜ. 22 ರಿಂದ 26 ರವರೆಗೆ ಜರುಗಲಿದೆ.

ನೀವು ನನಗೆ ಸಾಕ್ಷಿಗಳಾಗುವಿರಿ – ಎಂಬ ಮಹೋತ್ಸವದ ವಿಷಯದೊಂದಿಗೆ ನಡೆಯುವ 5 ದಿನಗಳ ಉತ್ಸವದ ಅವಧಿಯಲ್ಲಿ ಒಟ್ಟು 35 ಬಲಿ ಪೂಜೆಗಳು ನಡೆಯಲಿದೆ. ಜ. 22ರ ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಉಡುಪಿಯ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್‌ ಲೋಬೋ, ಜ. 23ರಂದು ಬೆಳಿಗ್ಗೆ 10 ಗಂಟೆಗೆ (ಕನ್ನಡ) ಪುತ್ತೂರಿನ ಧರ್ಮಾಧ್ಯಕ್ಷ ಜೀರಿಸ್ ಮಾರ್ ಮಕರಿಯೋಸ್ ಕಲಯಿಲ್‌, ಜ. 24ರಂದು ಸಂಜೆ 6 ಗಂಟೆಗೆ (ಕನ್ನಡ) ಬೆಳ್ತಂಗಡಿ ಧರ್ಮಾಧ್ಯಕ್ಷ ಲೊರೆನ್ಸ್ ಮುಕ್ಕುಝಿ, ಜ. 25ರಂದು ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಆಲೋಷಿಯಸ್ ಪ್ಲಾವ್ ಡಿ’ಸೋಜಾ, ಜ. 26ರಂದು ಬೆಳಿಗ್ಗೆ 10 ಗಂಟೆಗೆ (ಕೊಂಕಣಿ) ಬೆಂಗಳೂರಿನ ನಿವೃತ್ತ ಮಹಾ ಧರ್ಮಾಧ್ಯಕ್ಷ ಬರ್ನಾಡ್‌ ಮೊರಾಸ್ ಅವರು ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನೆರವೇರಿಸಲಿರುವರು.
ಮಹೋತ್ಸವದ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 8, 10, 12, ಮಧ್ಯಾಹ್ನ 2, 4, 6, 8 ಗಂಟೆಗೆ ಸೇರಿದಂತೆ 7 ಬಲಿಪೂಜೆಗಳು ನಡೆಯಲಿರುವುದು. ಜ. 21ರಂದು ಮಧ್ಯಾಹ್ನ 3:30 ಗಂಟೆಗೆ ಅಸ್ವಸ್ಥರಿಗಾಗಿ ದಿವ್ಯ ಬಲಿಪೂಜೆ, ಆರಾಧನೆ ಹಾಗೂ ಪರಮ ಪ್ರಸಾದದ ಮೆರವಣಿಗೆ ಇರಲಿರುವುದು ಎಂದು ಬಸಿಲಿಕದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

















































error: Content is protected !!
Scroll to Top