ಕಾರ್ಕಳ : 800 ವರ್ಷಗಳ ಇತಿಹಾಸವಿರುವ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೆವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ಜ. 22 ರಿಂದ 29 ರವರೆಗೆ ನಡೆಯಲಿದ್ದು, ವೇದಮೂರ್ತಿ ಬ್ರಹ್ಮಶ್ರೀ ಬೈಲೂರು ನರಸಿಂಹ ತಂತ್ರಿ, ವೇದಮೂರ್ತಿ ಬ್ರಹ್ಮಶ್ರೀ ಮಧುಸೂದನ ತಂತ್ರಿ ಹಾಗೂ ವರದರಾಜ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಲಿದೆ.
ಜ. 22
ಸಂಜೆ 3 ಗಂಟೆಗೆ ಬಿಲ್ಲವ ಸಂಘದಿಂದ ಕರ್ವಾಲು ಕ್ಷೇತ್ರಕ್ಕೆ ಹೊರೆ ಕಾಣಿಣೆಯ ಭವ್ಯ ಮೆರವಣಿಗೆ ನಡೆಯಲಿದೆ. 4 ಗಂಟೆಗೆ ಆಚಾರ್ಯಾದಿ ಋತ್ವಿಜರ ಸ್ವಾಗತ, ಉಗ್ರಾಣ ಮುಹೂರ್ತ, ಆಚಾರ್ಯಾದಿ ಋತ್ವಿಗ್ನರಣ ಅರಣಿ ಮಥನ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ಪ್ರಾಕಾರ ಬಲಿ, ರಾತ್ರಿ ಪೂಜೆ ನಡೆಯಲಿದೆ.
ಜ. 23
ಬೆಳಿಗ್ಗೆ 8 ಗಂಟೆಗೆ ಪುಣ್ಯಾಹವಾಚನ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಗಣಯಾಗ, ಬ್ರಹ್ಮಕೂರ್ಚ ಹೋಮ, ಕಂಕಣ ಬಂಧ ನವಗ್ರಹಯಾಗ, ಬಿಂಬಸುದ್ದಿ, ಪ್ರಾಯಾಶ್ಚಿತ್ತ ಹೋಮ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು ಸಂಜೆ 5 ಗಂಟೆಗೆ ಮಂಟಪ ಸಂಸ್ಕಾರ, ಕಲರ ಮಂಡಲ ರಚನೆ, ಶಕ್ತಿ ಹೋಮ, ಅಷ್ಟಬಂಧ ಪ್ರತಿಷ್ಠೆ, ಮಹಾಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವರ ಕಲಶಾಧಿವಾಸ, ಪರಿವಾರ ಸನ್ನಿಧಿಯಲ್ಲಿ ಕಲಶಾಧಿವಾಸ, ಅಧಿವಾಸ ಹೋಮಗಳು. ಸಂಜೆ 7ಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಚೈತ್ರಾ ಅಶ್ವಿನ್ ಕುಮಾರ್ ಕರ್ವಾಲು ಮತ್ತು ತಂಡದಿದಂದ ಸಂಗೀತ ಸಂಜೆ ನಡೆಯಲಿದೆ.
ಜ. 24
ಬೆಳಿಗ್ಗೆ 7 ಗಂಟೆಗೆ ಪುಣ್ಯಾಹವಾಚನ, ಗಣಯಾಗ, ತತ್ವ ಹೋಮ, ತತ್ವ ಕಲಶ, ಶಾಂತಿ ಹೋಮ, ಚಂಡಿಕಾ ಯಾಗ, ತತ್ವಕಲಶಾಭಿಷೇಕ, ಮಹಾಗಣಪತಿ ಮತ್ತು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಕಲಭಾಭಿಷೇಕ, ಪರಿವಾರ ಸನ್ನಿಧಿಯಲ್ಲಿ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 3 :30 ರಿಂದ ದಿಶಾ ಹೋಮ, ಚಕ್ರಾಬ್ಜ ಮಂಡಲ ಪೂಜೆ, ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ಪಂಚವಿಂಶತಿ ದ್ರವ್ಯ ಸಹಿತ ಏಕೋತ್ತರ ಪಂಚಸತ ಕಲಶಾಧಿವಾಸ ಅಧಿವಾಸ ಹೋಮಗಳು, ರಾಥ್ರಿ 8 : 30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ವಿಜಯ್ ಕಲಾವಿದರು ಕಿನ್ನಿಗೋಳಿ ಇವರಿಂದ ತೊಟ್ಟಿಲ್ ನಾಟಕ ಪ್ರದರ್ಶನಗೊಳ್ಳಲಿದೆ.
ಜ. 25 – ಬ್ರಹ್ಮಕುಂಭಾಬಿಷೇಕ
ಬೆಳಿಗ್ಗೆ 6 ಗಂಟೆಗೆ ಪುಣ್ಯಾಹವಾಚನ, ಗಣಯಾಗ, ವಿಶೇಷ ಶಾಂತಿ ಹೋಮ, ವಿಷ್ಣುಯಾಗ, ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ಕಲಾಶಾಭಿಷೇಕ, 9 : 45 ಗಂಟೆಗೆ ಮೀನ ಲಗ್ನ ಸುಮೂರ್ಹತದಲಲಿ ಬ್ರಹ್ಮಕುಂಭಾಬಿಷೇಕ, ನ್ಯಾಸ ಪೂಜೆ, ಮಹಾಪೂಜೆ, ಅವಸ್ರುತ ಬಲಿ, ಪಲ್ಲಪೂಜೆ, ಬ್ರಾಹ್ಮಣ ಸುವಾಸಿನಿ ಆರಾಧನೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ರಂಗಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10 ಗಂಟೆಗೆ ಶ್ರೀ ಆದಿ ಧೂಮಾವತಿ ಶ್ರೀ ದೆವಿ ಬೈದೆತಿ ಕೃಪಾಪೋಶಿತ ಯಕ್ಷಗಾನ ಮಂಡಳಿ ಗೆಜ್ಜೆಗಿರಿ ಪುತ್ತೂರು ಇವರಿಂದ ನೂತನ ಪ್ರಸಂಗ ಜರುಗಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ
ಜ. 25 ರ ಸಂಜೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಸಚಿವ ವಿ. ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತಸರ ಬ್ರಹ್ಮಶೀ ಕುತ್ಯಾರು ಕೇಂಜ ಶ್ರೀ ಶ್ರೀಧರ ತಂತ್ರಿ, ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಮ್. ಎಸ್., ಉದ್ಯಮಿ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಉದಯವಾಣಿ ವಿಶ್ರಾಂತ ಸಹಸಂಪಾದಕ ವೈ. ಮನೋಹರ ಪ್ರಸಾದ್, ಯರ್ಲಪಾಡಿ ಗ್ರಾ. ಪಂ. ಅಧ್ಯಕ್ಷೆ ಪ್ರಮೀಳಾ ಪೂಜಾರಿ, ಗೌರವ ಅಧ್ಯಕ್ಷ ಹೆಚ್ ಯುವರಾಜ್ ಹೆಕ್ಕಡ್ಕ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ ನವೀನ್ ಕುಮಾರ್ ರಾವ್, ಉದ್ಯಮಿ ಸಂದೀಪ್ ಕುಮಾರ್ ಶೆಟ್ಟಿ, ಆಡಳಿತ ಮೊಕ್ತೇಸರ ಅನಂತ ಪಟ್ಟಾಭಿ ರಾವ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಜ. 26
ಪ್ರಾರ್ಥನಾ ಪೂರ್ವಕ ಸ್ವಸ್ತಿ ಮಂಗಲವಾದನ, ಗಣಹೋಮ, ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ನವಕ ಪ್ರಧಾನ, ಗಣಪತಿ ದೇವರಿಗೆ ನವಕ ಪ್ರಧಾನ, ಚಂಡಿಕಾಯಾಗ, ಪ್ರಸನ್ನ ಪೂಜೆ, ಮಹಾಪೂಜೆ, ಬಲಿ, ಧ್ವಜಾರೋಹಣ, ಪಲ್ಲಪೂಜೆ, ಪ್ರಸಾದ ವಿತರಣೆ, ಬ್ರಾಹ್ಮಣ ಸುವಾಸಿನಿ ಆರಾಧನೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6.30 ಗಂಟೆಗೆ ಉತ್ಸವ ಬಲಿ, ಪಲ್ಲಕ್ಕಿ ಸೇವೆ, ವಸಂತ ಪೂಜೆ, ಮಹಾ ರಂಗಪೂಜಾ ಮಹೋತ್ಸವ, ಭೂತ ಬಲಿ, ಆರಾಧನಾ ಬಲಿ ನಡೆಯಲಿದೆ. ರಾತ್ರಿ 10 ಗಂಟೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ವತ ದಿನಕರ ಭಂಡಾರಿ ಕಣಜಾರು ರಚನೆ ನಿರ್ದೇಶನದ, ಮಂಜುನಾಥ ಬೈಲೂರು ಸಾರತ್ಯದ ಐಸಿರ ಕಲಾವಿದೆರ್ ಬೈಲೂರು ಇದರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪಿರಬನ್ನಗ ಪ್ರದರ್ಶನಗೊಳ್ಳಲಿದೆ.
ಜ. 27
ನವಕ ಪ್ರಧಾನ, ಕಲಶಾಭಿಷೇಕ, ವಿಷ್ಣು ಪಾರಾಯಣ, ದುರ್ಗಾನವಕ, ಪ್ರಮಥ ನವಕ, ಮಹಾಪೂಜೆ, ನಾಗದೇವರಿಗೆ ಕಲಶಾಭಿಷೇಕ, ಬ್ರಾಹ್ಮಣ ಸುವಾಸಿನಿ ಆರಾಧನೆ ಆಶ್ಲೇಷಾ ಬಲಿ, ಚಂಡಿಕಾ ಯಾಗ, ಮಹಾರಂಗ ಪೂಜೆ, ಮಧ್ಯಾಹ್ನ ಉತ್ಸವ ಬಲಿ, ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 6:30ರಿಂದ ಉತ್ಸವ ಬಲಿ, ದೊಡ್ಡ ರಂಗಪೂಜೆ, ಭೂತಬಲಿ, ಶಯನೋತ್ಸವ ಮತ್ತು ಕವಾಟ ಬಂಧನ ಜರುಗಲಿದೆ.
ಜ. 28
ಬೆಳಿಗ್ಗೆ 7 : 30 ಗಂಟೆಗೆ ಕವಾಟೋದ್ಘಾಟನೆ, ದಶವಿಧಸ್ನಾನ, ಪ್ರಸನ್ನ, ಪೂಜೆ, ಮಹಾಪೂಜೆ, ಉತ್ಸವಬಲಿ, ಆಶ್ಲೇಷಾ ಬಲಿ, ಚಂಡಿಕಾಯಾಗ, ಬ್ರಾಹ್ಮಣ ಸುವಾಸಿನಿ ಆರಾಧನೆ 10 ಗಂಟೆಗೆ ತುಲಾಭಾರ ಸೇವೆ ನಂತರ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 5 ಗಂಟೆಗೆ ಬೈಲೂರು ಶ್ರೀ ರಾಮ ಭಜನಾ ಮಡಳಿಯವರಿಂದ ಭಜನಾ ಕಾರ್ಯಕ್ರಮ. ರಾತ್ರಿ 8 : 30 ಗಂಟೆಗೆ ಉತ್ಸವ ಬಲಿ, ಮುಂಡಿತ್ತಾಯ ದೈವದ ಮತ್ತು ಪರಿವಾರ ದೈವಗಳ ನೇಮ, ಗ್ರಾಮ ಸವಾರಿ, ಧ್ವಜಾವರೋಹಣ ನಡೆಯಲಿದೆ.
ಜ. 29
ಬೆಳಿಗ್ಗೆ 7 ಗಂಟೆಯಿಂದ ಸಂಪ್ರೋಕ್ಷಣೆ, ಆಶ್ಲೇಷಾ ಬಲಿ ಸೇವೆ, ಮಹಾಪೂಜೆ, ಚಂಡಿಕಾಯಾಗ, ಮಹಾಮಂತ್ರಾಕ್ಷತೆ ಮಂಗಲ ನಂತರ ಅನ್ನಸಂತರ್ಪಣೆ ಜರುಗಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಜ. 22 – 29 : ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ
























