ಗಣರಾಜ್ಯೋತ್ಸವ ಮುಂದಿನ ಸೀಟುಗಳು ಶ್ರಮಜೀವಿಗಳಿಗೆ ಮೀಸಲು

ಕಾರ್ಮಿಕರು,ರಿಕ್ಷಾ ಎಳೆ​ಯು​ವ​ವರು, ತರ​ಕಾರಿ ಮಾರುವವರು, ದಿನಸಿ ವ್ಯಾಪಾ​ರಿ​ಗಳು ಅತಿಥಿಗಳು

ಹೊಸದಿಲ್ಲಿ : ಗಣರಾಜ್ಯೋತ್ಸವದಂಥ ದೊಡ್ಡ ಕಾರ್ಯಕ್ರಮಗಳಲ್ಲಿ ಮೊದಲ ಸಾಲಿನಲ್ಲಿ ಅತಿ ಗಣ್ಯರು ಆಸೀನರಾಗುವುದು ವಾಡಿಕೆ. ಆದರೆ ಈ ಸಲ ಹೊಸದಿಲ್ಲಿಯಲ್ಲಿ ನಡೆಯಲಿರುಯವ ಗಣ ರಾಜ್ಯೋತ್ಸವ ಸಮಾರಂಭದ ಮೊದಲ ಸಾಲು ಶ್ರಮಜೀವಿಗಳಿಗೆ ಮೀಸಲಾಗಿರುತ್ತದೆ. ಸಾ​ಮಾನ್ಯ ಜನರ ಸಹ​ಭಾ​ಗಿ​ತ್ವ ಥೀಮ್‌ ಅಡಿ​ಯಲ್ಲಿ ಆಯೋ​ಜಿ​ಸ​ಲಾ​ಗು​ತ್ತಿ​ರುವ ಈ ಬಾರಿಯ ಗಣ​ರಾ​ಜ್ಯೋ​ತ್ಸವ ಪರೇ​ಡ್‌​ನಲ್ಲಿ ವೇದಿಕೆ ಮುಂಭಾ​ಗದ ಸಾಲು​ಗಳನ್ನು ವಿಐ​ಪಿ​ಗ​ಳ ಬದಲಾಗಿ ಶ್ರಮ​ಜೀ​ವಿ​ಗ​ಳಿಗೆ ಮೀಸ​ಲಿ​ಡ​ಲು ನಿರ್ಧರಿಸಲಾಗಿದೆ.
ರಿಕ್ಷಾ ಎಳೆ​ಯು​ವ​ವರು, ತರ​ಕಾರಿ ಮಾರುವವರು, ದಿನಸಿ ವ್ಯಾಪಾ​ರಿ​ಗಳು ಮತ್ತು ನವೀಕೃತ ಸೆಂಟ್ರ​ಲ್‌​ವಿಸ್ತಾ ನಿರ್ಮಾ​ಣ​ದಲ್ಲಿ ಭಾಗಿಯಾದ ಕಾರ್ಮಿ​ಕರು ಹಾಗೂ ಅವರ ಕುಟುಂಬ, ಕರ್ತ​ವ್ಯ​ ಪ​ಥದ ನಿರ್ವ​ಹಣಾ ಕಾರ್ಮಿ​ಕ​ರಿಗೆ ಮೊದಲ ಸಾಲನ್ನು ಮೀಸ​ಲಿ​ರಿ​ಸ​ಲಾ​ಗಿದೆ. ಇವ​ರು​ ನಿಜ​ವಾ​ಗಲೂ ಗಣ​ರಾಜ್ಯ ದೇಶದ ಪ್ರತಿ​ನಿ​ಧಿ​ಗ​ಳಾ​ಗಿ​ದ್ದಾರೆ. ಹಾಗಾಗಿ ಈ ಬಾರಿ ಸಾಮಾ​ನ್ಯ​ರಿಗೆ ಈ ಬಾರಿ ಅವ​ಕಾಶ ನೀಡ​ಲಾ​ಗಿ​ದೆ ಎಂದು ಮೂಲಗಳು ತಿಳಿ​ಸಿವೆ.
ಈ ಬಾರಿ ಗಣ​ರಾ​ಜ್ಯೋ​ತ್ಸ​ವದ ಮುಖ್ಯ ಅತಿ​ಥಿ​ಯಾಗಿ ಈಜಿ​ಫ್ಟ್‌ನ ಅಧ್ಯಕ್ಷ ಅಬೆಲ್‌ ಫತಾಹ್‌ ಅಲ್‌-ಸಿಸಿ ಅವರು ಭಾಗ​ವ​ಹಿ​ಸು​ತ್ತಿ​ದ್ದಾರೆ. ಇವ​ರೊಂದಿಗೆ ಈಜಿಫ್ಟ್‌​ನಿಂದ ಆಗ​ಮಿ​ಸು​ತ್ತಿ​ರುವ 120 ಮಂದಿಯ ತಂಡ ಸಹ ಭಾಗಿ​ಯಾ​ಗು​ತ್ತಿದೆ. ಇದು ರಾಜ​ಪಥ ಎಂಬ ಹೆಸ​ರನ್ನು ಕರ್ತ​ವ್ಯ ​ಪಥ ಎಂದು ಬದ​ಲಾ​ಯಿ​ಸಿದ ಬಳಿಕ ನಡೆ​ಯು​ತ್ತಿ​ರುವ ಮೊದಲ ಗಣ​ರಾ​ಜ್ಯೋ​ತ್ಸ​ವ​ವಾ​ಗಿದೆ. ಈ ಬಾರಿ ಪರೇ​ಡ್‌ನ ವೇಳೆ ಒದ​ಗಿ​ಸ​ಲಾ​ಗು​ತ್ತಿದ್ದ ಸೀಟು​ಗ​ಳನ್ನು 45 ಸಾವಿ​ರಕ್ಕೆ ಇಳಿಕೆ ಮಾಡ​ಲಾ​ಗಿದೆ. ಇದ​ರಲ್ಲಿ 32 ಸಾವಿರ ಸೀಟು​ಗಳು ಹಾಗೂ ಬೀಟಿಂಗ್‌ ರಿಟ್ರೀಟ್‌ನ ಶೇ.10ರಷ್ಟು ಸೀಟು​ಗಳು ಆನ್‌ಲೈನ್‌​ನಲ್ಲಿ ಲಭ್ಯ​ವಿದೆ.

















































error: Content is protected !!
Scroll to Top