ಕೆದಿಂಜೆ : ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ

ಕಾರ್ಕಳ : ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ದಳ ರಕ್ಷಿಸಿದ ಘಟನೆ ಜ. 19 ರ ರಾತ್ರಿ ಕೆದಿಂಜೆಯಲ್ಲಿ ಸಂಭವಿಸಿದೆ. ಕುಂಟಲಗುಂಡೆ ನರ್ಸಿನಿವಾಸದ ಮಹಿಳೆಯೋರ್ವರು ಆಕಸ್ಮಿಕವಾಗಿ ಮನೆಯ ಮುಂಭಾಗದಲ್ಲಿರುವ ಆವರಣವಿಲ್ಲದ 35 ಅಡಿ ಆಳದ ಬಾವಿಗೆ ಬಿದ್ದಿದ್ದಾರೆ. ತಕ್ಷಣವೇ ಮನೆಯವರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ಜೀವಂತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್‌ ಮೋನಿಸ್‌, ಸಿಬ್ಬಂದಿಗಳಾದ ಉದಯ್‌ ಹೆಗ್ಡೆ, ಹರಿಪ್ರಸಾದ್‌ ಶೆಟ್ಟಿಗಾರ್‌, ಜಯಮೂಲ್ಯ, ಮನೋಹರ್‌ ಪ್ರಸಾದ್‌, ಹಸನ್‌ ಸಾಬ್‌ ಮುಲ್ತಾನಿ, ಗೃಹರಕ್ಷಕ ದಳದ ಸದಾನಂದ ಭಾಗಿಯಾಗಿದ್ದರು

















































error: Content is protected !!
Scroll to Top