ಬೈಲೂರು ವಲಯ ಮಟ್ಟದ ಸಾಧನ ಸಮಾವೇಶ

ಬೈಲೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾರ್ಕಳ ತಾಲೂಕು ಬಿ.ಸಿ. ಟ್ರಸ್ಟ್ ವತಿಯಿಂದ ಜ.18ರಂದು ಬೈಲೂರು ವಲಯದಲ್ಲಿ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಪಳ್ಳಿ ಮತ್ತು ನಿಂಜೂರು ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಬೈಲೂರು ವಲಯ ಮಟ್ಟದ ಸಾಧನ ಸಮಾವೇಶವು ಪಳ್ಳಿ ರಾಮಕೃಷ್ಣ ಸಭಾ ಭವನದಲ್ಲಿ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಗದೀಶ್ ಹೆಗ್ಡೆ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಡುಪಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಿರಿಯ ನಿರ್ದೇಶಕ ಶಿವರಾಯ ಪ್ರಭು ಅವರು ಕ್ಷೇತ್ರದ ಹಿನ್ನಲೆ, ಯೋಜನೆಯ ನಿಯಮಗಳ ಬಗ್ಗೆ, ಕಾರ್ಯಕ್ರಮಗಳ ಬಗ್ಗೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಕೃಷಿಕರು ಹಾಗೂ ಬೈಲೂರು ಗ್ರಾ. ಪಂ.ನ ಮಾಜಿ ಸದಸ್ಯ ಸಂತೋಷ್ ಶೆಟ್ಟಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಭಾಸ್ಕರ್ ವಿ., ಪಳ್ಳಿನಿಂಜೂರು ಗ್ರಾ. ಪಂ. ಅಧ್ಯಕ್ಷ ಸಂದೀಪ್ ಅಮೀನ್, ಸವಿತಾ ಸಮಾಜ ಉಡುಪಿ ಜಿಲ್ಲೆಯ ಅಧ್ಯಕ್ಷ ವಿಶ್ವನಾಥ ಭಂಡಾರಿ, ರಾಮಕೃಷ್ಣ ಸಭಾಭವನದ ಮಾಲೀಕ ಭರತ್ ಹೆಗ್ಡೆ, ವಲಯದ ಅಧ್ಯಕ್ಷ ಪ್ರೇಮ್ ಕುಮಾರ್, ಕುಕ್ಕುಂದೂರು ವಿಜೇತ ವಿಶೇಷ ಶಾಲೆಯ ಸಂಸ್ಥಾಪಕಿ ಡಾ| ಕಾಂತಿ ಹರೀಶ್, ಪಳ್ಳಿ ಒಕ್ಕೂಟದ ಅಧ್ಯಕ್ಷೆ ಬೇಬಿ ಸಾಲಿಯನ್, ನಿಂಜೂರು ಒಕ್ಕೂಟದ ಅಧ್ಯಕ್ಷ ರಾಜೇಶ್ ಆಚಾರ್ಯ, ಮಹಾಕಾಳಿ ಮಠದ ಅರ್ಚಕ ಗಣಪತಿ ಭಟ್, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಮತ್ತು ಎಲ್ಲಾ ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಲಯದ ಮೇಲ್ವಿಚಾರಕಿ ಸೌಮ್ಯ ಶೆಟ್ಟಿ ಸ್ವಾಗತಿಸಿ, ನಿಂಜೂರ್ ಒಕ್ಕೂಟದ ಕಾರ್ಯದರ್ಶಿ ಆಶಾ ಆಚಾರ್ಯ ವಂದಿಸಿದರು. ನಿರೂಪಣೆಯನ್ನು ಶ್ರೀಕಾಂತ್ ಪ್ರಭು ನೆರವೇರಿಸಿದರು.





























































































































error: Content is protected !!
Scroll to Top