ಕಾರ್ಕಳ : ಜೇಸಿಐ ಭಾರತದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವಲಯ 15ರ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಜೇಸಿಐ ಕಾರ್ಕಳ ರೂರಲ್‌ನ ಸ್ಥಾಪಕ, ನಲ್ಲೂರು ಗ್ರಾಮದ ಕಲತ್ರಪಾದೆಯ ಸತೀಶ್ ಪೂಜಾರಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜೇಸಿ ರಾಷ್ಟ್ರೀಯ ಅಧಿವೇಶನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಕುಮಾರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. 2003ರಲ್ಲಿ ಜೇಸಿ ಸಂಸ್ಥೆಗೆ ಸೇರಿದ ಸತೀಶ್ ಅವರು ಜೇಸಿಯಲ್ಲಿ ಹಲವು ಹುದ್ದೆಗಳನ್ನಲಂಕರಿಸಿ ವಲಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಜೇಸಿಐ ಭಾರತ ಹೊಸದಾಗಿ ಆರಂಭಿಸಿರುವ ಹಿರಿಯ ಜೇಸಿ ಸದಸ್ಯರ ಸಂಸ್ಥೆಯಲ್ಲಿ ಸತೀಶ್ ಅವರು ಎರಡನೇ ವಲಯಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಜೇಸಿಐ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ ವಲಯ 15ರ ಅಧ್ಯಕ್ಷರಾಗಿ ಸತೀಶ್ ಪೂಜಾರಿ






























































