ಕಾರ್ಕಳ : ಸಾರ್ವಜನಿಕ ಆಸ್ಪತ್ರೆ ಕಾರ್ಕಳದಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಮಹಿಳೆಯ ಚಿನ್ನ ಕಳವಾದ ಘಟನೆ ಜ. 17ರಂದು ನಡೆದಿದೆ. ಬೆಳ್ತಂಗಡಿ ತಾಲೂಕು ಅಳದಂಗಡಿ ಸುಲ್ಕೇರಿ ನಿವಾಸಿ ಉಷಾ ಎಂಬವರು ಜ. 15ರಂದು ಹೆರಿಗೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜ. 17ರಂದು 32 ಗ್ರಾಂ. ತೂಕದ ತನ್ನ ಕರಿಮಣಿಯನ್ನು ತೆಗೆದಿರಿಸಿ ಬಾತ್ ರೂಂ ತೆರಳಿದ್ದರು. ಬಳಿಕ ಬಂದು ನೋಡುವಾಗ ಚಿನ್ನದ ಕರಿಮಣಿ ಕಳವಾಗಿರುವುದು ಬೆಳಕಿಗೆ ಬಂದಿದೆ. ಆಕೆಯ ಗಂಡ ಸುಕೇತ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.
ಮೂರನೇ ಘಟನೆ
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂರನೇ ಬಾರಿ ಕಳ್ಳತನ ಪ್ರಕರಣ ದಾಖಲಾಗಿದೆ. ಕಳೆದ ಅ. 13ರಂದು ಓಪಿ (ಔಟ್ ಪೇಶೆಂಟ್) ಚೀಟಿಗಾಗಿ ನಿಂತಿದ್ದ ವೃದ್ಧೆಯ ಸರಕಳ್ಳತನಕ್ಕೆ ಮೂವರು ಮಹಿಳೆಯರು ಯತ್ನಿಸಿದ್ದರು. ಅಂದು ಆಸ್ಪತ್ರೆ ಸಿಬ್ಬಂದಿ ಹಾಗೂ ಆಟೋ ಚಾಲಕರು ಆ ಮೂವರು ಕಳ್ಳರನ್ನು ಹಿಡಿದು ಕಾರ್ಕಳ ನಗರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು.
ಅದೇ ತಿಂಗಳಲ್ಲಿ ಶುಶ್ರೂಷಕರ ಕೋಣೆಯಲ್ಲಿಟ್ಟಿದ್ದ 6 ಪವನ್ ತೂಕದ ಕರಿಮಣಿ ಕೂಡ ಕಳ್ಳತನವಾಗಿತ್ತು. ಆಸ್ಪತ್ರೆಯ ಅಧಿಕಾರಿ ರೇಚಲ್ ಡಿಸೋಜಾ ಕರ್ವತ್ಯ ವೇಳೆ ಶುಶ್ರೂಷಕರ ಕೋಣೆಯಲ್ಲಿಟ್ಟಿದ್ದ 1.45 ಲಕ್ಷ ರೂ. ಮೌಲ್ಯದ ಕರಿಮಣಿಯಿರುವ ಹ್ಯಾಂಡ್ ಬಾಗ್ ಕಳ್ಳರು ದೋಚಿದ್ದರು.































































