ಕಾರ್ಕಳ: ಅಡಕೆ ಕೊಯ್ಲು ಮಾಡುವಾಗ ಮರದಿಂದ ಬಿದ್ದು ಗಾಯಗೊಂಡಿದ್ದ ಬೆಳ್ಮಣ್ ಗ್ರಾಮದ ಕಂಬಳಗುತ್ತುವಿನ ವಿಶ್ವನಾಥ (52) ಎಂಬವರು ಚಿಕಿತ್ಸೆ ಫಲಿಸದೆ ಬುಧವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ಅವರು ಲಿಗೋರಿ ಡಿಕುನ್ಹಾ ಎಂಬವರ ತೋಟದಲ್ಲಿ ಅಡಕೆ ಕೊಯ್ಯುತ್ತಿರುವಾಗ ಮರದಿಂದ ಬಿದ್ದು ಗಾಯಗೊಂಡಿದ್ದರು. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಉಡುಪಿ ಅಜ್ಜರಕಾಡು ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ.
ಅಡಕೆ ಮರದಿಂದ ಬಿದ್ದು ಕಾರ್ಮಿಕ ಸಾವು
































































