ಕಾರ್ಕಳ: ಮುಡಾರು ಗ್ರಾಮದ ಹಡ್ಯಾಲು ಎಂಬಲ್ಲಿ ಮಿನಿ ಟಿಪ್ಪರ್ ಚರಂಡಿಗೆ ಬಿದ್ದು ಟಿಪ್ಪರ್‌ನಲ್ಲಿದ್ದ ಅಬ್ದುಲ್ ಹಮೀದ್ ಎಂಬವರು ಗಾಯಗೊಂಡ ಘಟನೆ ಡಿ.23ರಂದು ಮಧ್ಯಾಹ್ನ ಸಂಭವಿಸಿದೆ. ಚಾಲಕ ಸಮೀರ್‌ನ ನಿಯಂತ್ರಣ ತಪ್ಪಿ ಟಿಪ್ಪರ್ ಎಡಬದಿಯ ಚರಂಡಿಗೆ ಬಿದ್ದಿದೆ. ಪರಿಣಾಮವಾಗಿ ಹಮೀದ್ ಅವರ ಕುತ್ತಿಗೆಗೆ ಗಾಯವಾಗಿದ್ದು, ಹಾತೀಮ್ ಎಂಬವರ ಎಡ ಕಿವಿ ಬಳಿ ಗಾಯವಾಗಿದೆ. ಚಾಲಕ ಸಮೀರ್ ಗಾಯಗಳಿಲ್ಲದೆ ಪಾರಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































